ಧಾರವಾಡ: ಶ್ರೀಧರ ಗಸ್ತಿ ಅವರು ರಚಿಸಿದ ಮಕ್ಕಳ ಸಾಹಿತ್ಯ ಕೃತಿಗಳು ಶಾಲಾ ಜೀವನದ ವಾಸ್ತವಿಕ ಅನುಭವಗಳ ಸಾರವಾಗಿವೆ ಎಂದು ಲೇಖಕ ಬಸು ಬೇವಿನಗಿಡದ ಹೇಳಿದರು.

ಚಿಲಿಪಿಲಿ ಪ್ರಕಾಶನ ವತಿಯಿಂದ ರಾ.ಹ ದೇಶಪಾಂಡೆ ಸಭಾಂಗಣದಲ್ಲಿ ಈಚೆಗೆ ನಡೆದ ಸಾಹಿತಿ ಶ್ರೀಧರ ಗಸ್ತಿ ಅವರ `ದಿ ಕಪ್ಟಿಚ್ಡ ಬೈ ದೇವಮ್ಮ' ಹಾಗೂ `ಎಳೆಬಾಳೆ ಸುಳಿ ನಾನವ್ವ' ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ‘ಶ್ರೀಧರ ಗಸ್ತಿ ಅವರ ಸಾಹಿತ್ಯದಲ್ಲಿ ಬದುಕಿನ ಸತ್ಯಗಳಿವೆ. ಆಧುನಿಕತೆಯ ವಾಸ್ತವಿದ ಕಥೆಗಳಿವೆ’ ಎಂದರು.

ರಂಗಕರ್ಮಿ ಝಾಕಿರ್ ನದಾಫ್ `ಎಳೆಬಾಳೆ ಸುಳಿನಾನವ್ವ' ಕೃತಿ ಕುರಿತು ಮಾತನಾಡಿ, ಮಕ್ಕಳ ನಾಟಕ ಬರೆಯುವುದು ಪ್ರಯಾಸದಾಯಕ. ಮಕ್ಕಳ ಮನಸ್ಥಿತಿ, ಭಾವನೆ ಅರಿತು ನಾಟಕ ರಚಿಸಬೇಕಾಗುತ್ತದೆ. ಬಾಲ್ಯವಿವಾಹಂಥ ಸಾಮಾಜಿಕ ಅನಿಷ್ಟಗಳ ಕುರಿತು ನಾಟಕ ರಚಿಸಿ ಸಮಾಜ ಪರಿವರ್ತನೆಗೆ ಪ್ರಯತ್ನಿಸಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ಸಿದ್ಧರಾಮ ಹಿಪ್ಪರಗಿ, ವೈ.ಜಿ.ಭಗವತಿ, ಶ್ರೀಧರ ಗಸ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.