ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೀರಜ್‌ ಎಕ್ಸ್‌ಪ್ರೆಸ್ ರೈಲಿನ ಸಮಯ ಪರಿಷ್ಕರಣೆ

Last Updated 4 ಏಪ್ರಿಲ್ 2021, 3:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ನಿಲ್ದಾಣದಿಂದ ಮೀರಜ್‌ಗೆ ಹೊರಡುವ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರದಲ್ಲಿ ಸಮಯ ಪರಿಷ್ಕರಣೆ ಮಾಡಲಾಗಿದ್ದು, ಏ. 11ರಿಂದ ಜಾರಿಗೆ ಬರಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ರಾತ್ರಿ 10.05ಕ್ಕೆ ಹೊರಡುವ ರೈಲು ಯಶವಂತಪುರ (ರಾ. 10.15), ತುಮಕೂರು (ರಾ. 11.03), ತಿಪಟೂರು (ರಾ. 12.03), ಅರಸೀಕೆರೆ (ರಾ. 12.28), ಕಡೂರು (ರಾ. 1.09), ಬಿರೂರು (ರಾ. 1.21), ದಾವಣಗೆರೆ (ರಾ. 2.48), ಹರಿಹರ (ಬೆಳಗಿನ ಜಾವ 3.05), ರಾಣೆಬೆನ್ನೂರು (3.52), ಹಾವೇರಿ (4.02) ನಿಲ್ದಾಣಗಳಿಗೆ ಬರಲಿದೆ. ಹುಬ್ಬಳ್ಳಿ ಹಾಗೂ ಮೀರಜ್‌ ನಡುವಿನ ಸಂಚಾರದಲ್ಲಿ ಬದಲಾವಣೆ ಇರುವುದಿಲ್ಲ.

ಏ. 12ರಿಂದ ಕೆಎಸ್‌ಆರ್‌ ಬೆಂಗಳೂರು–ಜೋಧಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರಿನಿಂದ ರಾತ್ರಿ 10.40ಕ್ಕೆ ಹೊರಟು ಬೆಳಿಗ್ಗೆ 4.32ಕ್ಕೆ ಹಾವೇರಿಗೆ ಬರಲಿದೆ. ಹುಬ್ಬಳ್ಳಿ–ಜೋಧಪುರ ಜಂಕ್ಷನ್‌ ನಡುವಿನ ಸಮಯದಲ್ಲಿ ಬದಲಾವಣೆಯಾಗುವುದಿಲ್ಲ. ಬೆಂಗಳೂರು–ಗಾಂಧಿಧಾಮ ಎಕ್ಸ್‌ಪ್ರೆಸ್‌ ವಿಶೇಷ ರೈಲು ಏ. 17ರಿಂದ ರಾತ್ರಿ 10.40ಕ್ಕೆ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 4.32ಕ್ಕೆ ಹಾವೇರಿ ಮುಟ್ಟಲಿದೆ. ಹುಬ್ಬಳ್ಳಿ–ಗಾಂಧಿಧಾಮ ನಡುವಿನ ಸಂಚಾರದ ಸಮಯದಲ್ಲಿ ಬದಲಾವಣೆ ಇರುವುದಿಲ್ಲ.

ಏ. 13ರಿಂದ ಮೈಸೂರು–ಅಜ್ಮೀರ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ರಾತ್ತಿ 7 ಗಂಟೆಗೆ ಮೈಸೂರಿನಿಂದ ಹೊರಟು ಮಂಡ್ಯ, ರಾಮನಗರ, ಬೆಂಗಳೂರು, ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಬಿರೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರ ಮಾರ್ಗದ ಮೂಲಕ ಹಾವೇರಿಗೆ ಬೆಳಿಗ್ಗೆ 4.32ಕ್ಕೆ ಬರಲಿದೆ. ಹುಬ್ಬಳ್ಳಿ–ಅಜ್ಮೀರ್‌ ನಡುವಿನ ಮಾರ್ಗದ ಸಂಚಾರದ ಸಮಯದಲ್ಲಿ ಬದಲಾವಣೆಯಿಲ್ಲ.

ಏ. 11ರಿಂದ ಮೈಸೂರು–ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್‌ ರೈಲು ಮೈಸೂರಿನಿಂದ ರಾತ್ರಿ 7.23ಕ್ಕೆ ಹೊರಟು ರಾ. 12.26ಕ್ಕೆ ಪೆನುಕೊಂಡಕ್ಕೆ ಬರಲಿದೆ. ಧರ್ಮಾವರ ಜಂಕ್ಷನ್‌ನಿಂದ ಹುಬ್ಬಳ್ಳಿ ತನಕದ ಸಂಚಾರದಲ್ಲಿ ಬದಲಾವಣೆ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT