ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಷ್ಣೋಯಿ ಸಮಾಜದ ಯಶಸ್ಸಿಗೆ ಪರಿಶ್ರಮವೇ ಕಾರಣ : ದಿಗಂಬರ ಕಾಮತ್

Last Updated 26 ಆಗಸ್ಟ್ 2018, 16:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಷ್ಣೋಯಿ ಸಮಾಜ ಹಾಗೂ ರಾಜಸ್ಥಾನದ ಉದ್ಯಮಿಗಳು ವ್ಯಾಪಾರ– ಉದ್ಯಮದಲ್ಲಿ ಯಶಸ್ಸು ಗಳಿಸಿದ್ದರೆ ಅದಕ್ಕೆ ಅವರ ಪರಿಶ್ರಮವೇ ಕಾರಣ ಎಂದು ಗೋವಾದ ಶಾಸಕ ದಿಗಂಬರ ಕಾಮತ್ ಹೇಳಿದರು.

ಬಿಷ್ಣೋಯಿ ಸಮಾಜ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಮಧ್ಯಾಹ್ನದ ನಂತರ ಸಂಜೆ ವರೆಗೆ ವಹಿವಾಟು ಬಂದ್ ಮಾಡುವುದು ಗೋವಾದಲ್ಲಿ ಸಾಮಾನ್ಯವಾಗಿತ್ತು. ಆದರೆ, ರಾಜಸ್ಥಾನದ ಉದ್ಯಮಿಗಳು ಬಂದು ನೆಲೆಯೂರಿದ ನಂತರ ಆ ‍ಪ್ರವೃತ್ತಿ ಬದಲಾಯಿತು. ಬೆಳಿಗ್ಗೆಯಿಂದ ರಾತ್ರಿ ವರೆಗೆ ದುಡಿಯುವ ಮನೋಭಾವ ನಿಮ್ಮಲ್ಲಿದೆ. ಆಯಾ ರಾಜ್ಯದ ಸಂಸ್ಕೃತಿಗೆ ಹೊಂದಿಕೊಳ್ಳುವ ಗುಣವೂ ಇದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಿಹಿ ತಿನಿಸು ಮಾರಾಟಕ್ಕೆ ರಾಜಸ್ಥಾನದವರು ಹೆಸರುವಾಸಿಯಾಗಿದ್ದರು. ಆದರೆ ಅದನ್ನು ಮೀರಿ ಈಗ ಸ್ಯಾನಿಟರಿ, ಎಲೆಕ್ಟ್ರಿಕಲ್, ಹಾರ್ಡ್‌ವೇರ್‌ ವಸ್ತುಗಳ ಮಾರಾಟದಲ್ಲಿಯೂ ತೊಡಗಿಕೊಂಡಿದ್ದಾರೆ. ಆರೇಳು ವರ್ಷಗಳ ನಂತರ ಹುಬ್ಬಳ್ಳಿಗೆ ಬಂದಿದ್ದೇನೆ. ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಹಿಂದೆ ರಾಜಕಾರಣಿಗಳು ಗೋವಾಕ್ಕೆ ಬಂದು ಅಲ್ಲಿಂದ ವಿಮಾನ ಪ್ರಯಾಣ ಮಾಡುತ್ತಿದ್ದರು. ಈಗ ಇಲ್ಲಿಯೇ ವಿಮಾನ ನಿಲ್ದಾಣವೂ ಕಾರ್ಯಾರಂಭ ಮಾಡಿದೆ’ ಎಂದರು.

ಆಶಾ ದಿಗಂಬರ ಕಾಮತ್. ಸಮಾಜದ ಮುಖಂಡರಾದ ಮಹೇಂದ್ರ ಸಿಂಗಿ, ಕಾಳು ಸಿಂಗ್, ಪಾರಸ್‌ಮಲ್ ಪಠುವಾ, ಬೀರ್‌ಬಲ್ ಬಿಷ್ಣೋಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT