ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಮತ ಎಣಿಕೆಗೆ ಸಿದ್ಧತೆ

Published 2 ಜೂನ್ 2024, 6:19 IST
Last Updated 2 ಜೂನ್ 2024, 6:19 IST
ಅಕ್ಷರ ಗಾತ್ರ

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಜೂನ್‌ 4ರಂದು ನಡೆಯಲಿದ್ದು, ಇದಕ್ಕಾಗಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಲೊಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ ತಿಳಿಸಿದರು.

ಮತ ಎಣಿಕೆ ಕೇಂದ್ರವಾದ ಪಟ್ಟಣದ ಆರ್.ಡಿ.ಕಾಲೇಜಿನಲ್ಲಿ ಸ್ಥಾಪಿಸಲಾದ ಮಾಧ್ಯಮ‌ ಕೇಂದ್ರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಚಿಕ್ಕೋಡಿ ಲೋಕಸಭಾ ಮತಕ್ಷೇತ್ರಕ್ಕೆ ಮೇ 7 ರಂದು ಜರುಗಿದ ಮತದಾನದ ವೇಳೆ ಚಲಾವಣೆಯಾದ ಒಟ್ಟು 1385688 ಮತಗಳನ್ನು, ಹಾಗೂ 4722 ಅಂಚೆ ಮತಗಳ ಎಣಿಕೆ ನಡೆಯಲಿದೆ. ಜೊತೆಗೆ ಇಟಿಪಿಬಿಎಸ್ ಮತಗಳ ಎಣಿಕೆಯೂ ನಡೆಯಲಿದೆ ಎಂದರು.

8 ಇವಿಎಂ ಕೌಂಟಿಂಗ್ ಕೇಂದ್ರ ಸ್ಥಾಪಿಸಲಾಗಿರುತ್ತದೆ. ಪ್ರತಿ ಮತ ಎಣಿಕ ಕೇಂದ್ರದಲ್ಲಿ 12 ಟೇಬಲ್ ‌ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಗಳ ಎಣಿಕೆಗೆ 16 ಟೇಬಲ್ ಹಾಗೂ ಇಟಿಪಿಬಿಎಸ್ ಮತಗಳ ಎಣಿಕೆಗೆ 2 ಕೇಂದ್ರ ಸ್ಥಾಪಿಸಲಾಗಿದೆ ಎಂದರು. 

ಮತ ಎಣಿಕೆಗೆ ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ಒಟ್ಟು 139 ಜನ ಕೌಂಟಿಂಗ್ ಸೂಪರವೈಸರ್, 158 ಜನ ಕೌಂಟಿಗ್ ಅಸಿಸ್ಟಂಟ್ ಹಾಗೂ 139 ಜನ ಮೈಕ್ರೊ ಆಬ್ಸರ್ವರಗಳನ್ನು ಹಾಗೂ 40 ಜನ ಇಟಿಪಿಬಿಎಸ್ ಮತಗಳ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು. 

 8 ಗಂಟೆಗೆ ಅಂಚೆ ಮತಗಳ ಎಣಿಕೆ ನಡೆಯಲಿದೆ. 8.30ಕ್ಕೆ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆ. ನಂತರ ಪ್ರತಿ ಮತಕ್ಷೇತ್ರದ 5 ವಿ.ವಿ.ಪ್ಯಾಟ್‌ಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಎಣಿಕ ಕಾರ್ಯ ಪ್ರಾರಂಬಿಸಲಾಗುವುದು.

ಮತ ಎಣಿಕೆ ಮುಗಿದ ನಂತರ ವಿದ್ಯುನ್ಮಾನ ಯಂತ್ರಗಳನ್ನು ಬೆಳಗಾವಿ ನಗರದ ಹಿಂಡಲಗಾದಲ್ಲಿನ ವೇರಹೌಸ್‌ಗೆ ಕಳುಹಿಸಲಾಗುವದು.

ಮತ ಎಣಿಕ ಏಜೆಂಟರು ಮೊಬೈಲ್‌ಗಳನ್ನು ಮತ ಎಣಿಕಾ ಕೇಂದ್ರದೊಳಗೆ ತರಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ‌ ಮಾತನಾಡಿ, ‘ಮತ ಎಣಿಕಾ ಕಾರ್ಯವು ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ಜರುಗಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್‌ ಸಿಬ್ಬಂದಿ ನೀಯೋಜಿಸಲಾಗಿದೆ‘ ಎಂದು ತಿಳಿಸಿದರು.

ಜೂ.1ರಿಂದ ಮತ ಎಣಿಕೆ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶಕ್ಕೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಮತ ಎಣಿಕೆ ದಿನದಂದು ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ನಿಪ್ಪಾಣಿ ಮಾರ್ಗದಿಂದ ಬರುವ ವಾಹನಗಳಿಗೆ ಐಟಿಐ ಕಾಲೇಜು‌ ಮೈದಾನದಲ್ಲಿ. ಯಕ್ಸಂಬಾ ಮಾರ್ಗದಿಂದ ಬರುವ ವಾಹನಗಳಿಗೆ ಭೀಮ‌ ನಗರದ ಹತ್ತಿರದ‌ ಮುನ್ಸಿಪಾಲಿಟಿ ಖಾಲಿ ಜಾಗೆಯಲ್ಲಿ, ಅಂಕಲಿ‌ ಮಾರ್ಗದಿಂದ ಬರುವ ವಾಹನಗಳನ್ನು ಪರಟಿ ನಾಗಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಾಗೂ ಮುಲ್ಲಾ ಪ್ಲಾಟ ಖಾಲಿ ಸ್ಥಳದಲ್ಲಿ, ಹುಕ್ಕೇರಿ ಮಾರ್ಗದಿಂದ ಬರುವ ವಾಹನಗಳನ್ನು ಪದ್ಮಾ ಮಂಗಲ ಕಾರ್ಯಾಲಯದ ಹತ್ತಿರ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT