ಮುಂದುವರೆದ ಕಾರ್ಯಾಚರಣೆ: ಗಾಂಜಾ ವಶ

ಹುಬ್ಬಳ್ಳಿ: ನಗರದಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ. ಗಾಂಜಾ ಮಾರಾಟದಲ್ಲಿ ತೊಡಗಿದ್ದ ಏಳು ಜನರನ್ನು ಬುಧವಾರ ಬಂಧಿಸಿದ್ದಾರೆ.
ಕಾರವಾರ ರಸ್ತೆಯ ಚರ್ಚ್ ಹತ್ತಿರ ₹12 ಸಾವಿರ ಮೌಲ್ಯದ 1,200 ಗ್ರಾಂ ಗಾಂಜಾ ವಶಪಡಿಸಿಕೊಂಡು, ಆಟೊಚಾಲಕ ವಿಜಯಪುರದ ಮೈನುದ್ದೀನ್ ಶೇಖ್ ಮತ್ತು ಹಳೇ ಹುಬ್ಬಳ್ಳಿ ಈಶ್ವರ ನಗರದ ಸಾಧಿಕ್ ನರಗುಂದ ಎಂಬುವರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸರು ತಿಳಿಸಿದ್ದಾರೆ.
ಅಶೋಕ ನಗರ ಠಾಣೆ ಪೊಲೀಸರು ನೃಪತುಂಗ ಬೆಟ್ಟದ ಹತ್ತಿರ ಗಾಂಜಾ ಸಾಗಾಟ ಮಾಡುತ್ತಿದ್ದ ಐವರನ್ನು ಬಂಧಿಸಿ ₹9,500 ಮೌಲ್ಯದ 190 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತರಿಂದ ₹400 ನಗದು, ದ್ವಿಚಕ್ರ ವಾಹನ ಮತ್ತು ಐದು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ಧಾರವಾಡ ಪರಶುರಾಮ್ ಬೊಳನ್ನವರ, ಬಸಯ್ಯ ಪೂಜಾರ, ಗಣೇಶ ಕಾಕಡೆ, ಭೀಮ ಜಾಡರ, ಶಿವಾನಂದ ಕಾಳೆ ಬಂಧಿತರು.
ಪ್ರಕರಣ ದಾಖಲು: ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಮಂಗಳವಾರ ಅವಳಿ ನಗರಗಳಲ್ಲಿ 506 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ₹2.72 ಲಕ್ಷ ದಂಡ ವಿಧಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.