ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೆಡಿಟ್‌ ಕಾರ್ಡ್‌ ಬಿಡುಗಡೆ ಮಾಡಿದ ಐಒಸಿಎಲ್‌

Last Updated 25 ಸೆಪ್ಟೆಂಬರ್ 2019, 9:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗ್ರಾಹಕರು ಪೆಟ್ರೋಲ್‌ ಬಂಕ್‌ಗಳಲ್ಲಿ ಕ್ರೆಡಿಟ್‌ ಕಾರ್ಡ್‌ ಮೂಲಕ ವ್ಯವಹರಿಸಲು ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಐಒಸಿಎಲ್‌, ಎಚ್‌ಡಿಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಕಾರ್ಡ್‌ನ ಬಿಡುಗಡೆ ಸಮಾರಂಭ ಗೋಕುಲ ರಸ್ತೆಯ ಬಫ್ನಾ ಪೆಟ್ರೋಲ್‌ ಬಂಕ್‌ನಲ್ಲಿ ಬುಧವಾರ ನಡೆಯಿತು.

ಡಿಸಿಪಿ (ಸಿಎಆರ್‌) ಎಸ್‌.ವಿ. ಯಾದವ, ಎಸಿಪಿ ಎಸ್‌.ಎಂ. ಸಂದಿಗವಾಡ, ಎಚ್‌ಡಿಎಫ್‌ಸಿ ಹುಬ್ಬಳ್ಳಿ ಶಾಖೆಯ ಮುಖ್ಯಸ್ಥ ಅರವಿಂದ, ಐಒಸಿಎಲ್‌ನ ಬೆಳಗಾವಿ ವಿಭಾಗದ ಮುಖ್ಯಸ್ಥ ಬಿನಯ ಕುಮಾರ್ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಕಾರ್ಡ್‌ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಬಿನಯ ‘ಆನ್‌ಲೈನ್‌ ವಹಿವಾಟಿಗೆ ಒತ್ತು ಕೊಡುವ ಉದ್ದೇಶದಿಂದ ಇದನ್ನು ಜಾರಿಗೆ ತರಲಾಗಿದೆ. ಈ ವ್ಯವಸ್ಥೆ ಮೊದಲು ಮೆಟ್ರೊ ನಗರಗಳಲ್ಲಿ ಮಾತ್ರ‌ ಇದ್ದು, ಈಗ ಎರಡನೇ ದರ್ಜೆಯ ನಗರಗಳಿಗೂ ವಿಸ್ತರಿಸಲಾಗುತ್ತಿದೆ. ಎಚ್‌ಡಿಎಫ್‌ಸಿ ಜೊತೆಗಿನ ಈ ಒಪ್ಪಂದದಿಂದ ಡಿಜಿಟಲ್‌ ವಹಿವಾಟಿಗೆ ಅನುಕೂಲವಾಗುತ್ತದೆ’ ಎಂದರು.

ಸಂದಿಗವಾಡ ಮಾತನಾಡಿ ‘ಹೆಲ್ಮೆಟ್‌ ಇದ್ದರೆ ಸವಾರರ ಜೀವ ಉಳಿಯುತ್ತದೆ. ಆದ್ದರಿಂದ ಪೆಟ್ರೋಲ್‌ ಬಂಕ್‌ಗಳಲ್ಲಿ ಐಎಸ್‌ಐ ಗುರುತಿನ ಹೆಲ್ಮೆಟ್‌ ಮಾರಾಟ ಮಾಡುವ ಬಗ್ಗೆ ಐಒಸಿಎಲ್‌ ಯೋಜನೆ ರೂಪಿಸಬೇಕು. ಪೊಲೀಸ್‌ ಇಲಾಖೆ ವತಿಯಿಂದಲೂ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಇದರ ಬಗ್ಗೆ ಯೋಜಿಸಲಾಗುವುದು. ಪ್ರಾಣಪಾಯ ಆಗದಿರಲಿ ಎನ್ನುವ ಕಾರಣಕ್ಕೆ ಹೆಲ್ಮೆಟ್‌ ಹಾಕದೇ ಇರುವವರಿಗೆ ದಂಡ ವಿಧಿಸಲಾಗುತ್ತದೆ. ಯಾರಿಗೂ ಕಿರುಕುಳ ಉದ್ದೇಶ ನಮ್ಮದಲ್ಲ’ ಎಂದರು.

‘ಬದಲಾದ ದಂಡ ನಿಯಮದ ಬಗ್ಗೆ ಇಲಾಖೆಗೆ ಅಧಿಸೂಚನೆ ಬಂದಿಲ್ಲ. ಬಂದ ಬಳಿಕ ಹೊಸ ನಿಯಮದಂತೆ ದಂಡ ವಿಧಿಸಲಾಗುವುದು. ಸರಿಯಾದ ದಾಖಲೆ ಜೊತೆಯಲ್ಲಿಟ್ಟುಕೊಂಡರೆ ಯಾರೂ ಸುಮ್ಮನೆ ದಂಡ ಹಾಕುವುದಿಲ್ಲ’ ಎಂದರು.

ರಾಜೀವ ದೊಡ್ಡಮನಿ, ಐಒಸಿಎಲ್‌ ಮ್ಯಾನೇಜರ್‌ ಪರಬ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT