ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊನ್ನಾವರ | ಅಸ್ವಸ್ಥ ಜಿಂಕೆ ಸಾವು

Published 7 ಜುಲೈ 2024, 16:11 IST
Last Updated 7 ಜುಲೈ 2024, 16:11 IST
ಅಕ್ಷರ ಗಾತ್ರ

ಹೊನ್ನಾವರ: ತಾಲ್ಲೂಕಿನ ಹೆರಾವಲಿ ಗ್ರಾಮದ ಬಡ್ನಕೋಡ್ಲ ಎಂಬ ಊರಿನ ಹಳ್ಳವೊಂದರಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಜಿಂಕೆಯೊಂದು ವಾರದ ಹಿಂದೆ ಕಂಡುಬಂದಿದ್ದು ತಡವಾಗಿ ಬೆಳಕಿಗೆ ಬಂದಿದೆ.

‘ಕಬ್ಬಿಣದ ತಂತಿಯಿಂದ ಮಾಡಿದ್ದ ಉರುಳು ಸುತ್ತಿಕೊಂಡಿದ್ದ ಕಾಲಿನಲ್ಲಿ ಉಂಟಾಗಿದ್ದ ಗಾಯದಲ್ಲಿ ಹುಳುಗಳಾಗಿದ್ದವು. ಕೊಂಬು ಕೂಡ ಮುರಿದಿದ್ದ ಜಿಂಕೆ ತೀರ ಅಸ್ವಸ್ಥ ಸ್ಥಿತಿಯಲ್ಲಿತ್ತು’ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಸ್ಥಳಕ್ಕ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಅಸ್ವಸ್ಥಗೊಂಡಿದ್ದ ಜಿಂಕೆಯನ್ನು ಸಾಗಿಸುವಾಗ ಮಾರ್ಗ ಮಧ್ಯೆ ಅದು ಮೃತಪಟ್ಟಿದೆ.

‘ಈಚಿನ ದಿನಗಳಲ್ಲಿ ಜಿಂಕೆ, ಕಾನು ಕುರಿ ಮೊದಲಾದ ಕಾಡುಪ್ರಾಣಿಗಳು ಈ ಭಾಗದಲ್ಲಿ ಸಾಯುತ್ತಿರುವುದು ಆತಂಕಕ್ಕೆಡೆಮಾಡಿದೆ. ಘಟನೆಗೆ ಕಾರಣ ಕಂಡುಹಿಡಿದು ಅರಣ್ಯ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸುವ ಜೊತೆಗೆ ಅರಣ್ಯ ಹಾಗೂ ಕಾಡುಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು’ ಎಂದು ವನ್ಯಜೀವಿಪ್ರೇಮಿಗಳು ಆಗ್ರಹಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT