ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹಿಸಿ ಚಕ್ಕಡಿ ಮೆರವಣಿಗೆ

Last Updated 21 ಸೆಪ್ಟೆಂಬರ್ 2020, 15:07 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಂಟೂರು ರಸ್ತೆಯಲ್ಲಿ ಮೀನು ಹಾಗೂ ಮಾಂಸದ ಮಾರುಕಟ್ಟೆ ಆರಂಭಿಸಿರುವುದರಿಂದ ರೈತರಿಗೆ, ಜನರಿಗೆ ತೊಂದರೆಯಾಗುತ್ತಿದೆ. ಅದನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ರೈತರು ಹುಬ್ಬಳ್ಳಿಯಲ್ಲಿ ಚಕ್ಕಡಿ ಮೆರವಣಿಗೆ ನಡೆಸಿದರು.

ಈ ಭಾಗದಲ್ಲಿ ರೈತರ ಜಮೀನಗಳಿದ್ದು, ರೈತರು ತಿರುಗಾಡುವ ರಸ್ತೆಯಾಗಿದೆ. ಈಗ ಅಲ್ಲಿ ಮೀನು, ಮಾಂಸದ ಮಾರುಕಟ್ಟೆ ಆರಂಭಿಸಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ.

ವೀರಾಪುರ, ಯಲ್ಲಾಪುರ, ಬಿಡನಾಳ, ಗಬ್ಬೂರು, ಬೊಮ್ಮಾಪುರ, ಗಣೇಶಪೇಟ ಸೇರಿದಂತೆ ವಿವಿಧ ಪ್ರದೇಶಗಳ ರೈತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಂಟೂರು ರಸ್ತೆಯನ್ನು 14 ಮೀಟರ್‌ರಿಂದ 33 ಮೀಟರ್‌ಗೆ ವಿಸ್ತರಿಸಬೇಕು. ಹಳ್ಯಾಳದಿಂದ ಮಂಟೂರು ಸೇರುವ 4 ಕಿ.ಮೀ. ರಸ್ತೆ, ಹಳ್ಯಾಳದಿಂದ ಗುಡೆನಕಟ್ಟಿಯವರೆಗಿನ ರಸ್ತೆ ನಿರ್ಮಿಸಬೇಕು. ಹುಬ್ಬಳ್ಳಿ–ಹಳ್ಯಾಳ ರಸ್ತೆಯಲ್ಲಿರು ರೈಲ್ವೆ ಮಾರ್ಗ ದಾಟಲು ಮೇಲು ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಬಂಕಾಪುರ ವೃತ್ತ, ನ್ಯೂ ಇಂಗ್ಲಿಷ್‌ ಶಾಲೆ, ಕಮರಿಪೇಟೆ ಪೊಲೀಸ್‌ ಠಾಣೆ, ಬೈರಿದೇವರಕೊಪ್ಪ, ಬಿಡನಾಳ ಬಳಿ ಇರುವ ದರ್ಗಾದಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಶಿವಾನಂದ ಮುತ್ತಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT