ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಪೋಸ್ಟ್‌ಕಾರ್ಡ್‌ ಅಭಿನಂದನೆ ಅಭಿಯಾನ

Published 15 ಫೆಬ್ರುವರಿ 2024, 16:18 IST
Last Updated 15 ಫೆಬ್ರುವರಿ 2024, 16:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಗಳ ಬಹುದಿನಗಳ ಕನಸನ್ನು ನನಸು ಮಾಡಿದ್ದಾರೆ. ಎಲ್ಲರೂ ಪೋಸ್ಟ್ ಕಾರ್ಡ್‌ನಲ್ಲಿ ‘ಮೋದಿ ಜಿ ಅಭಿನಂದನ್’ ಎಂದು ಬರೆದು ಪ್ರಧಾನಿ ಮೋದಿ ಅವರಿಗೆ ಕಳುಹಿಸಬೇಕು’ ಎಂದು ಬಿಜೆಪಿ ಮಾಧ್ಯಮ ಸಮಿತಿಯ ರಾಜ್ಯ ಸದಸ್ಯ ಸಿದ್ದು ಮೊಗಲಿಶೆಟ್ಟರ್ ಹೇಳಿದರು. 

ಇಲ್ಲಿನ 39ನೇ ವಾರ್ಡ್‌ನ ವಿಶ್ವೇಶ್ವರ ನಗರದ ಗಣಪತಿ ದೇವಸ್ಥಾನದ ಸಭಾಭವನದಲ್ಲಿ ಈಚೆಗೆ ಬಿಜೆಪಿ ವಾರ್ಡ್‌ ಸಂಘಟನಾತ್ಮಕ ಸಭೆಯಲ್ಲಿ ಅವರು ಮಾತನಾಡಿದರು. 

‘ವಾರ್ಡ್‌ನಲ್ಲಿ ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಸಕಾಲದಲ್ಲಿ ಮುಗಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ’ ಎಂದರು.  

ಮುಖಂಡ ಆನಂದ ಪಾಟೀಲ, ಜಿಲ್ಲಾ ವಕ್ತಾರ ರವಿ ನಾಯಕ ಮಾತನಾಡಿದರು. ಸೀಮಾ ಸಿದ್ದು ಮೊಗಲಿಶೆಟ್ಟರ್‌ ಅಧ್ಯಕ್ಷತೆ ವಹಿಸಿದ್ದರು.   

ಪ್ರಮುಖರಾದ ರಘು ಧಾರವಾಡಕರ, ಲೋಕೇಶ, ಅರ್ಚನಾ.ಕೆ, ಜಯಂತಿಲಾಲ ಚೋಪ್ರಾ, ಕಿರಣ,  ಶ್ರೀಧರ ಚೌಗಲಾ, ಕೃಷ್ಣ ಪಾಸ್ತೆ, ಶ್ರೀಧರ ಅಡಿನವರ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT