ಗುರುವಾರ , ನವೆಂಬರ್ 26, 2020
20 °C
ಪ್ರಲ್ಹಾದ ಜೋಶಿ ಪತ್ನಿ ಒಡೆತನದ ಗೋದಾಮು

ಹುಬ್ಬಳ್ಳಿ: ಗೋದಾಮಿಗೆ ಬೆಂಕಿ, ₹4.5 ಕೋಟಿಗೂ ಅಧಿಕ ಮೊತ್ತದ ಸಾಮಗ್ರಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Fire accident

ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕಿನ ಶೆರೇವಾಡ ಕ್ರಾಸ್ ಬಳಿಯ ವಿಭವ ಕೈಗಾರಿಕೆಗೆ ಸೇರಿದ ಪೊರಕೆ ತಯಾರಿಕೆ ಘಟಕ ಮತ್ತು ಗೋದಾಮಿನಲ್ಲಿ ಸೋಮವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿ ಅಂದಾಜು ₹ 4.5 ಕೋಟಿಗೂ ಅಧಿಕ ಮೊತ್ತದ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪತ್ನಿ ಜ್ಯೋತಿ ಜೋಶಿ ಮತ್ತು ಎಚ್.ಎನ್. ನಂದಕುಮಾರ ಒಡೆತನದ ಕೈಗಾರಿಕೆ ಇದಾಗಿದೆ. ಹಾನಿಯಾದ ಸ್ಥಳಕ್ಕೆ ಜೋಶಿ ಮಂಗಳವಾರ ಭೇಟಿ ನೀಡಿದರು.

ವಿಭವ ಕೈಗಾರಿಕೆಯಲ್ಲಿ 555 ಮಂಕಿ ಪೊರಕೆ, ಫಿನಾಯಿಲ್ ಉತ್ಪಾದನೆ ಮಾಡಲಾಗುತ್ತಿತ್ತು.

ಈ ವೇಳೆ ಮಾತನಾಡಿದ ಜೋಶಿ ಬೆಂಕಿ ಅವಘಡದಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ.  ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ. ಈ ಘಟನೆ ಕುರಿತು ಯಾರನ್ನೂ ದೂಷಿಸುವುದಿಲ್ಲ. ಅನೇಕ ಕಡೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಅವಘಡಗಳು ಮರಳಿ ಸಂಭವಿಸದಂತೆ ಮುಂಜಾಗ್ರತಾ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು