ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆ ಪಕ್ಕ ದೇವರ ಮೂರ್ತಿ ಪತ್ತೆ

Last Updated 8 ಅಕ್ಟೋಬರ್ 2019, 13:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಚವ್ಹಾಣ ಗ್ರೀನ್ ಗಾರ್ಡನ್‌ನ ಶಿವಪುರ ಕಾಲೊನಿಯ ಕಾಲುವೆಗೆ ಹೊಂದಿಕೊಂಡಂತಿರುವ ಪಾಲಿಕೆಗೆ ಸೇರಿದ ಖಾಲಿ ಜಾಗದಲ್ಲಿ ಮಂಗಳವಾರ ದೇವರ ಮೂರ್ತಿಯೊಂದು ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶದ ಜನರು ಸ್ಥಳಕ್ಕೆ ಭೇಟಿ ನೀಡಿ, ಮೂರ್ತಿಯ ದರ್ಶನ ಪಡೆಯುತ್ತಿದ್ದಾರೆ.

‘ಮೂರು ದಿನದ ಹಿಂದೆ ಸುರಿದ ಮಳೆಯಿಂದಾಗಿ ಖಾಲಿ ಜಾಗದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿತ್ತು. ಗಿಡಗಂಟಿ ಬೆಳೆದು, ಕೊಳಚೆ ನಿಂತಿದ್ದರಿಂದ ಹೆಚ್ಚು ಸೊಳ್ಳೆಗಳು ಬರುತ್ತಿದ್ದವು. ಹಾಗಾಗಿ, ಬೆಳಿಗ್ಗೆ ಕೆಲ ಸ್ಥಳೀಯರು ಜಾಗವನ್ನು ಸ್ವಚ್ಛಗೊಳಿಸಿ, ಮಣ್ಣನ್ನು ಎತ್ತಿ ಹಾಕುತ್ತಿದ್ದರು. ಆಗ ಚಪ್ಪಟೆಯಾಕಾರಾದ ಕಲ್ಲಿನಲ್ಲಿ ಕೆತ್ತಲಾಗಿರುವ ದೇವರ ಮೂರ್ತಿ ಸಿಕ್ಕಿತು’ ಎಂದು ಸ್ಥಳೀಯ ಎಸ್‌.ಎಸ್‌.ಕೆ ಸಮಾಜದ ಮುಖಂಡರಾದ ಸಿ.ಕೆ. ಪವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಲಕ್ಷ್ಮಿ ಮೂರ್ತಿ:

‘ಸ್ಥಳೀಯ ಅರ್ಚಕರೊಬ್ಬರನ್ನು ಸ್ಥಳಕ್ಕೆ ಕರೆಸಿ, ಮೂರ್ತಿಯನ್ನು ಅವರಿಗೆ ತೋರಿಸಿದಾಗ ಅವರು ಇದು ಲಕ್ಷ್ಮಿ ದೇವಿಯ ಮೂರ್ತಿ ಎಂದು ತಿಳಿಸಿದರು. ಬಳಿಕ, ಅದನ್ನು ಸ್ವಚ್ಛಗೊಳಿಸಿ ಪೂಜೆ ನೆರವೇರಿಸಿದರು. ಮೂರ್ತಿ ನೋಡಲು ಬರುತ್ತಿರುವವರು ಸಹ ಪೂಜೆ ಮಾಡಿ ಹೋಗುತ್ತಿದ್ದಾರೆ’ ಎಂದು ಅವರು ಹೇಳಿದರು.

ಪೂಜಾ ಕಾರ್ಯಕ್ಕೆ ಅನುಕೂಲವಾಗುವಂತೆ ಸ್ಥಳದಲ್ಲಿ ಚಿಕ್ಕ ಪೆಂಡಾಲ್ ಕೂಡ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT