ಶುಕ್ರವಾರ, ಅಕ್ಟೋಬರ್ 7, 2022
24 °C

ಜೈಭೀಮ ನಗರ: ಪಲ್ಲಕ್ಕಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಹುಬ್ಬಳ್ಳಿ: ಆಷಾಢ ಮಾಸದ ಅಂಗವಾಗಿ ನಗರದ ಕೆ.ಇ.ಬಿ ಹತ್ತಿರದ ಜೈಭೀಮ ನಗರದ ಮರಿಯಮ್ಮಾ ದೇವಿ ದೇವಸ್ಥಾನದಲ್ಲಿ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ಹಾಗೂ ಉಡಿ ತುಂಬಿ ಎಣ್ಣೆ ಕೊಡುವ ಕಾರ್ಯಕ್ರಮ ಮಂಗಳವಾರ ನಡೆಯಿತು. 

ಬೆಳಿಗ್ಗೆ ದೇವಿಯರ ಮೂರ್ತಿಗಳಿಗೆ ಮಹಾಭಿಷೇಕ ಮತ್ತು ವಿಶೇಷ ಪುಷ್ಪಾಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ನಂತರ ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ಮಾತೋಶ್ರೀ ಅಮ್ಮನವರು ಚಾಲನೆ ನೀಡಿದರು.

ಬಮ್ಮಾಪೂರ ಓಣಿಯಲ್ಲಿರುವ ಗ್ರಾಮದೇವತೆಯರಾದ ದ್ಯಾಮವ್ವ ದೇವಿ ಮತ್ತು ದುರ್ಗವ್ವ ದೇವಿಗೆ ಉಡಿತುಂಬಿ ಎಣ್ಣೆ-ದೀಪ ಕೊಟ್ಟು ಪೂಜೆ ಮಾಡಲಾಯಿತು. ನಂತರ ದೇವಸ್ಥಾನದಲ್ಲಿ ಮಹಾಮಂಗಳಾರತಿ ನೆರವೇರಿದ ನಂತರ, ಅನ್ನಸಂತರ್ಪಣೆ ಜರುಗಿತು.

ದೇವಸ್ಥಾನದ ಅಧ್ಯಕ್ಷ ವಿರುಪಾಕ್ಷಿ ಚಲವಾದಿ, ಬಿ.ಎಸ್. ಪಾಟೀಲ, ಯಲ್ಲಪ್ಪ ಯರಗುಪ್ಪಿ, ಶಿವಾನಂದ ಜೇಕಿನಕಟ್ಟಿ, ರವಿ ಅಮರಾವತಿ, ಬಸವರಾಜ ಕಠಾರೆ, ಶಿವಮೂರ್ತಿ ಚಲವಾದಿ, ಮಧುಪ್ರಕಾಶ ಗದಗ ಹಾಗೂ ಓಣಿಯ ಹಿರಿಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು