ಶನಿವಾರ, ಮೇ 28, 2022
30 °C

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಟ್ಟಿಹೋಳಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳ್ನಾವರ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಸವೇಶ ವಿ. ಹಟ್ಟಿಹೊಳಿ ಹಾಗೂ ಉಪಾಧ್ಯಕ್ಷರಾಗಿ ಅರ್ಜುನ ಅಷ್ಟೇಕರ ಶನಿವಾರ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎರಡು ಸ್ಥಾನಕ್ಕೆ ತಲಾ ಒಬ್ಬರಷ್ಟೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿ ವಿ.ಕೆ. ಚಿಕ್ಕಮಠ ನೂತನ ಪದಾಧಿಕಾರಿಗಳ ಆಯ್ಕೆ ಘೋಷಿಸಿದರು. ಈಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿತ್ತು.

ನಿರ್ದೇಶಕರಾದ ಸೋಮಶೇಖರ ಇನಾಮದಾರ, ನೂರಅಹ್ಮದ್ ಕಿತ್ತೂರ, ಸಿದ್ದಪ್ಪ ಕಿರ್ಲೋಸ್ಕರ್, ಪರಮೇಶ್ವರ ತೇಗೂರ, ಜಗದೀಶ ಮೂಲಿಮನಿ, ನಾರಾಯಣ ಮೋರೆ, ಎಸ್.ಎಚ್. ಲಲಿತಾ, ಕವಿತಾ ಹಸಬಿಮಠ, ಅಧಿಕಾರಿಗಳಾದ ವಿರೂಪಾಕ್ಷಪ್ಪಯ್ಯ ಚಿಕ್ಕಮಠ, ಮಹಾಂತೇಶ ತೇಲಗಾರ, ಕಾರ್ಯದರ್ಶಿ ವಿನಾಯಕ ದುಲಬಾಜಿ, ಹಿರಿಯರಾದ ಮಧು ಬಡಸ್ಕರ್, ಲಿಂಗರಾಜ ಮೂಲಿಮನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು