ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ವ್ಯಾಪಾರಿಗೆ ₹2.36 ಲಕ್ಷ ವಂಚನೆ

Published 26 ಜೂನ್ 2024, 16:15 IST
Last Updated 26 ಜೂನ್ 2024, 16:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿಯ ಶೀಲವಂತರ ಓಣಿಯ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಶ್ಯಾಮಸುಂದರ ಮೀಠಾ, ಅಂಗಡಿ ಮಾಲೀಕ ರವೀಂದ್ರ ರಾಜಪುರೋಹಿತ ಅವರಿಗೆ ₹2.36 ಲಕ್ಷ ವಂಚಿಸಿ ಪರಾರಿಯಾದ ಆರೋಪದ ಕುರಿತು ಘಂಟಿಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಗಡಿ ಮಾಲೀಕ ಆರೋಪಿ ಶ್ಯಾಮಸುಂದರಗೆ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ಹಣ ನೀಡಿ, ಅಳಗುಂಡಗಿ ಓಣಿಯ ವ್ಯಕ್ತಿಯೊಬ್ಬರಿಗೆ ತಲುಪಿಸುವಂತೆ ಹೇಳಿ, ತನ್ನ ಬೈಕ್‌ ನೀಡಿದ್ದರು. ಆದರೆ, ಅವನು ಬೈಕ್‌ ಅನ್ನು ಅಳಗುಂಡಗಿ ಓಣಿಯಲ್ಲಿ ನಿಲ್ಲಿಸಿ, ಹಣದ ಸಮೇತ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT