ಹುಬ್ಬಳ್ಳಿ: ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯಲ್ಲಿನ ಸುಮಾರು 50 ವರ್ಷದ ಹಿಂದಿನ ಸಯ್ಯದ್ ಮಂಜಿಲ್ ಹೆಸರಿನ ಕಟ್ಟಿಗೆ ಹಾಗೂ ಮಣ್ಣಿನ ಕಟ್ಟಡದಲ್ಲಿ ಶುಕ್ರವಾರ ಅಗ್ನಿ ಅವಘಡ ನಡೆದಿದ್ದು, ಅಪಾರ ಪ್ರಮಾಣದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಕಟ್ಟಡದಲ್ಲಿ ರೆಗ್ಜಿನ್ ವಸ್ತುಗಳ ತಯಾರಿಕೆ, ಟೈಯರ್ ಶಾಪ್, ಜ್ಯೂಸ್ ಸೆಂಟರ್, ಅಂಗಡಿ, ಕ್ರೀಡಾ ಪರಿಕರಗಳು, ಟ್ರೇಡಿಂಗ್ ಕಂಪನಿ ಮತ್ತು ಶ್ರಾವ್ಯ ಕ್ಲಿನಿಕ್, ರೀಯಲ್ ಎಸ್ಟೇಟ್ ಕಚೇರಿ, ಸಿಸಿಟಿವಿ ಕ್ಯಾಮೆರಾ ಮಾರಾಟದ ಅಂಗಡಿ, ಬೇಕರಿ ಸೇರಿದಂತೆ 12ಕ್ಕೂ ಹೆಚ್ಚು ಅಂಗಡಿಗಳಿದ್ದವು.

ನೆಲಮಹಡಿಯಲ್ಲಿರುವ ರೆಗ್ಜಿನ್ ವಸ್ತುಗಳ ಅಂಗಡಿಗೆ ಶಾರ್ಟ್ ಸರ್ಕಿಟ್ನಿಂದ ಬೆಂಕಿ ತಗುಲಿದ್ದರಿಂದ, ಮೇಲ್ಮಹಡಿಯ ಅಂಗಡಿಗಳಿಗೂ ಬೆಂಕಿ ಆವರಿಸಿತ್ತು. ಅಲ್ಲಿ ಅಪಾರ ಪ್ರಮಾಣದಲ್ಲಿ ರೆಗ್ಜಿನ್ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಹೀಗಾಗಿ ಬೆಂಕಿ ಬೇಗ ಹೊತ್ತಿಕೊಂಡಿದೆ. ಅಂಗಡಿಗಳ ಮಾಲೀಕರು ಸಾರ್ವಜನಿಕರ ಸಹಕಾರದಿಂದ ಬೆಲೆ ಬಾಳುವ ವಸ್ತುಗಳನ್ನು ಹೊರ ತೆಗೆದು, ನಷ್ಟವಾಗದಂತೆ ನೋಡಿಕೊಂಡರು. ಐದು ಅಗ್ನಿಶಾಮಕ ವಾಹನಗಳ ಜೊತೆ 40 ಸಿಬ್ಬಂದಿ ನಿರಂತರ ಆರು ಗಂಟೆ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು.

ಇರುವುದರಿಂದ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎರಡು ಅಗ್ನಿ ಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಕಟ್ಟಿಗೆ ಚಾವಣಿ ಹಾಗೂ ಮಣ್ಣಿನ ಕಟ್ಟಡವಾಗಿರುವುದರಿಂದ ಬೆಂಕಿಯ ತೀವ್ರತೆಗೆ ಕಟ್ಟಡ ಬಹುತೇಕ ಸುಟ್ಟು ಹೋಗಿದೆ. ಯಾವ ಕ್ಷಣದಲ್ಲಾದರೂ ಕಟ್ಟಡ ಕುಸಿಯಬಹುದೆಂದು, ಶಹರ ಠಾಣೆ ಪೊಲೀಸರು ಪ್ರವೇಶ ನಿರ್ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.