‘ಸಿಇಟಿ, ನೀಟ್; ಉಚಿತ ತರಬೇತಿ’
‘ಸಿಇಟಿ ಹಾಗೂ ನೀಟ್ ಎದುರಿಸಲು ವಿದ್ಯಾರ್ಥಿಗಳಗೆ ಉಚಿತವಾಗಿ ತರಬೇತಿ ನೀಡಲು ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು. ‘ಕೋಚಿಂಗ್ ಕ್ಲಾಸ್‌ಗೆ ಹೋದರೆ ಉತ್ತಮ ಮಾರ್ಗದರ್ಶನ ಸಿಗುತ್ತದೆ. ಮಕ್ಕಳು ಪ್ರೇರಣೆ ಪಡೆದರೆ ಮಾತ್ರ ಯಾವ ಪರೀಕ್ಷೆಯನ್ನಾದರೂ ಎದುರಿಸಬಹುದು’ ಎಂದರು. ‘ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ಮನೆಯಲ್ಲಿ ಟಿ.ವಿ ನೋಡುತ್ತಿರಲಿಲ್ಲ. ಗ್ರಂಥಾಲಯಕ್ಕೆ ಹೋಗಿ ಅಧ್ಯಯನ ಮಾಡುತ್ತಿದ್ದೆ. ಮಕ್ಕಳು ಎಲ್ಲ ಅಡೆತಡೆಗಳನ್ನು ಮೀರಿ ಸಾಧನೆಯೆಡೆಗೆ ಸಾಗಬೇಕು’ ಎಂದು ಸಲಹೆ ನೀಡಿದರು.