ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಸಂಪನ್ಮೂಲ ಬಳಸಿ: ಕುನಾಲ್ ಕುಮಾರ್

‘ಸುಸ್ಥಿರ ನಗರಗಳ ಭಾರತ’ ಕುರಿತ ಕಾರ್ಯಾಗಾರ
Last Updated 25 ಆಗಸ್ಟ್ 2022, 17:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಅಡಿ ಹುಬ್ಬಳ್ಳಿ –ಧಾರವಾಡ ಇತರ ನಗರಗಳಿಗೆ ಮಾದರಿಯಾಗಿ ಬೆಳವಣಿಗೆ ಹೊಂದಬೇಕು‌ ಎಂದು ಸ್ಮಾರ್ಟ್ ಸಿಟಿ ಮಿಷನ್‌ ಜಂಟಿ ಕಾರ್ಯದರ್ಶಿ ಕುನಾಲ್ ಕುಮಾರ್ ಹೇಳಿದರು.

ನಗರದಲ್ಲಿ ಗುರುವಾರ ಯುರೋಪಿಯನ್ ಯೂನಿಯನ್, ವಿಶ್ವ ಆರ್ಥಿಕ ವೇದಿಕೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್, ಎ.ಎಫ್.ಡಿ, ಹುಬ್ಬಳ್ಳಿ –ಧಾರವಾಡ ಸ್ಮಾರ್ಟ್ ಸಿಟಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಸುಸ್ಥಿರ ನಗರಗಳ ಭಾರತ’ ಕಾರ್ಯಕ್ರಮ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.‌

ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಸ್ವಚ್ಛ ನಗರವನ್ನಾಗಿ ಮಾಡಬೇಕು ಎಂದರು.

ದೇಶಪಾಂಡೆ ಫೌಂಡೇಷನ್ ಸಿಇಒ ಅರವಿಂದ ಚಿಂಚೋರೆ ಮಾತನಾಡಿ, ನಗರಗಳ ಜತೆಗೆ ಗ್ರಾಮಗಳಿಗೂ ‘ಸ್ಮಾರ್ಟ್’ ರೂಪ ನೀಡಬೇಕಾಗಿದೆ ಎಂದರು.

ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಅರ್ಬನ್ ಅಫೇರ್ಸ್‌ನ ಕಾರ್ಯಕ್ರಮ‌ ನಿರ್ದೇಶಕ ನಯೀಮ್ ಕೆರೂವಾಲಾ ಮಾತನಾಡಿ, ಹಸಿರು ಸಂಚಾರ ಪಥ (ಗ್ರೀನ್ ಮೊಬಿಲಿಟಿ ಕಾರಿಡಾರ್) ನಿರ್ಮಾಣ ಹಂತದಲ್ಲಿ ಹಲವು ಸವಾಲುಗಳು ಎದುರಾಗುತ್ತಿವೆ. ಮೂಲಸೌಕರ್ಯ ಸಕಾಲದಲ್ಲಿ ಸಿಕ್ಕರೆ ಶೀಘ್ರವಾಗಿ ನಗರಗಳು ಬೆಳೆಯಲಿವೆ. ಹವಾಮಾನ ಬದಲಾವಣೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮೊದಲ‌ ಸ್ಥಾನದಲ್ಲಿದೆ‌ ಎಂದು ತಿಳಿಸಿದರು.

ವಿಶ್ವ ಆರ್ಥಿಕ ವೇದಿಕೆ ಸಿಫೋರ್ ಐಆರ್‌ನ ಪುರುಷೋತ್ತಮ ಕೌಶಿಕ್, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಮಾತನಾಡಿದರು.

ಸ್ಮಾರ್ಟ್ ಸಿಟಿ ಯೋಜನೆಯ ಚಾರ್ಟರ್ಡ್ ಅಕೌಂಟೆಂಟ್ ಎಸ್.ಬಿ.ಶೆಟ್ಟಿ, ಸ್ಮಾರ್ಟ್ ಸಿಟಿ ಯೋಜನೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜೀಜ್ ದೇಸಾಯಿ, ಉಪ ‍ಪ್ರಧಾನ ವ್ಯವಸ್ಥಾಪಕ ಚನ್ನಬಸವರಾಜ, ಉದ್ಯಮಿ ವಿ.ಎಸ್.ವಿ. ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT