ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ ವುಮೆನ್ಸ್ ಲೀಗ್ ಕ್ರಿಕೆಟ್: ವಿಜಯಪುರ ವುಮೆನ್ಸ್ ಕ್ಲಬ್‌ಗೆ ಪ್ರಶಸ್ತಿ

ಹುಬ್ಬಳ್ಳಿ ವುಮೆನ್ಸ್ ಲೀಗ್ ಅಂತರ ಕ್ಯಾಂಪ್‌ ಆಹ್ವಾನಿತ ಕ್ರಿಕೆಟ್ ಟೂರ್ನಿ
Published 17 ಜೂನ್ 2024, 15:53 IST
Last Updated 17 ಜೂನ್ 2024, 15:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಲ್ಪ ಮೊತ್ತ ಗಳಿಸಿದರೂ ಎದುರಾಳಿ ತಂಡವನ್ನು ನಿಯಂತ್ರಿಸಿದ ವಿಜಯಪುರ ವುಮೆನ್ಸ್‌ ಕ್ರಿಕೆಟ್‌ ಕ್ಲಬ್ ತಂಡವು ಹುಬ್ಬಳ್ಳಿ ವುಮೆನ್ಸ್ ಕ್ರಿಕೆಟ್ ಅಕಾಡೆಮಿ ಆಯೋಜಿಸಿದ್ದ ಹುಬ್ಬಳ್ಳಿ ವುಮೆನ್ಸ್ ಲೀಗ್ ಅಂತರ ಕ್ಯಾಂಪ್‌ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.

ನಗರದ ಸಪ್ತಗಿರಿ ಲೇಔಟ್‌ನ ಬಿ.ಜಿ.ಮೈದಾನದಲ್ಲಿ ಸೋಮವಾರ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ವಿಜಯಪುರ ವುಮೆನ್ಸ್ ಕ್ರಿಕೆಟ್ ಕ್ಲಬ್ ತಂಡವು ಎಸ್‌ಎಂಎಸ್ ಟೈಗರ್ಸ್ ಉಡುಪಿ ತಂಡದ ಎದುರು 5 ರನ್‌ಗಳಿಂದ ಜಯಿಸಿತು.

ಟೂರ್ನಿಯಲ್ಲಿ ವಿಜಯಪುರ ತಂಡವು 7 ಅಂಕಗಳೊಂದಿಗೆ ಅಗ್ರ ಸ್ಥಾನ ಗಳಿಸಿದರೆ, ಹುಬ್ಬಳ್ಳಿ ವುಮೆನ್ಸ್ ಕ್ರಿಕೆಟ್‌ ಅಕಾಡೆಮಿ –3, ಎಸ್‌ಎಂಎಸ್ ಟೈಗರ್ಸ್‌ ಉಡುಪಿ– 2 ಅಂಕ ಪಡೆದವು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವಿಜಯಪುರ ವುಮೆನ್ಸ್ ಕ್ರಿಕೆಟ್ ಕ್ಲಬ್ ತಂಡವು 12 ಓವರ್‌ಗಳಲ್ಲಿ (ಮಳೆ ಕಾರಣ ಓವರ್ ಕಡಿತ) 5 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಎಸ್‌ಎಂಎಸ್ ಟೈಗರ್ಸ್ ತಂಡಕ್ಕೆ 12 ಓವರ್‌ಗಳಲ್ಲಿ 4 ವಿಕೆಟ್‌ಗೆ 48 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಎಸ್‌ಎಂಎಸ್ ಟೈಗರ್ಸ್ ತಂಡದ ಕಸುಮಾ 20 (37 ಎಸೆತ) ತಾಳ್ಮೆಯ ಆಟವಾಡಿದರೂ ಗೆಲುವು ಒಲಿಯಲಿಲ್ಲ. ಶಾಲಿನಿ ಕಲಾಲ್, ನಂದಿನಿ ಪಾಟೀಲ ತಲಾ ಒಂದು ವಿಕೆಟ್ ಕಬಳಿಸಿದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ವಿಜಯಪುರ ತಂಡಕ್ಕೆ ಚಿನ್ಮಯಿ ಆಸರೆಯಾದರು. 34 ನಿಮಿಷ ಕ್ರೀಸ್‌ನಲ್ಲಿದ್ದ ಅವರು 21 (23 ಎ, 4X2) ರನ್ ಗಳಿಸಿದರು.

ವಿಜಯಪುರ ತಂಡದ ಜಯಶ್ರೀ ಪಾಟೀಲ ಉತ್ತಮ ಬ್ಯಾಟರ್‌ (93 ರನ್‌), ಎಸ್‌ಎಂಎಸ್ ಟೈಗರ್ಸ್ ಉಡುಪಿ ತಂಡದ ಲಕ್ಷ್ಮಿ ಬಿ. ಸರಣಿ ಶ್ರೇಷ್ಠ (54 ರನ್‌, 5 ವಿಕೆಟ್‌), ವಿಜಯಪುರ ತಂಡದ ನಂದಿನಿ ಪಾಟೀಲ ಉತ್ತಮ ಬೌಲರ್ (7 ವಿಕೆಟ್‌), ಎಸ್‌ಎಂಎಸ್ ಟೈಗರ್ಸ್ ಉಡುಪಿ ತಂಡದ ರಶ್ಮಿ ಆರ್‌. ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿ ಪಡೆದರು.

ಹುಬ್ಬಳ್ಳಿ ವುಮೆನ್ಸ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಸಂತೋಷ್‌ ಕಾಮತ್‌, ಕಾರ್ಯದರ್ಶಿ ವೃಂದಾ ಶಾನಭಾಗ, ಉಪಾಧ್ಯಕ್ಷ ರಮೇಶ ನಾಯಕ, ಅಕಾಡೆಮಿಯ ಮುಖ್ಯ ಕೋಚ್ ಸಂತೋಷ್ ಕುಮಾರ್ ಶೆರೆಗಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿದ್ದರು. 

ಸಂಕ್ಷಿಪ್ತ ಸ್ಕೋರು: ವಿಜಯಪುರ ವುಮೆನ್ಸ್ ಕ್ರಿಕೆಟ್ ಕ್ಲಬ್‌: 12 ಓವರ್‌ಗಳಲ್ಲಿ 5ಕ್ಕೆ 53 (ಚಿನ್ಮಯಿ 21, ಭೂಮಿಕಾ ಆರ್., 7; ಅನಘಾ 3ಕ್ಕೆ 1, ಚಿತ್ರಾ ಸೋನು 12ಕ್ಕೆ 1). ಎಸ್‌ಎಂಎಸ್ ಟೈಗರ್ಸ್ ಉಡುಪಿ: 12 ಓವರ್‌ಗಳಲ್ಲಿ 4ಕ್ಕೆ 48 (ಕುಸುಮಾ 20, ಲಕ್ಷ್ಮಿ 14; ನಂದಿನಿ ಪಾಟೀಲ 7ಕ್ಕೆ 1, ಶಾಲಿನಿ ಕಲಾಲ್ 6ಕ್ಕೆ 1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT