ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ರೈಲು: ರದ್ದು, ಮಾರ್ಗ ಬದಲಾವಣೆ

Last Updated 31 ಜನವರಿ 2022, 15:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಸಂಶಿ- ಯಲವಿಗಿ ಮಾರ್ಗದಲ್ಲಿ ಕಾಮಗಾರಿ ನಡೆದಿರುವುದರಿಂದ ಕೆಳಗಿನ ರೈಲ್ವೆ ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ.

ಫೆ.4 ರಿಂದ 12ರವರೆಗೆ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಿಂದ ಹೊರಡುವ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ–ಚಿತ್ರದುರ್ಗ ಎಕ್ಸ್ ಪ್ರೆಸ್‌ (ರೈಲು ಸಂಖ್ಯೆ 07347) ಹಾಗೂ ಚಿತ್ರದುರ್ಗ– ಹುಬ್ಬಳ್ಳಿ ಎಕ್ಸ್ ಪ್ರೆಸ್‌ (07348) ರೈಲಿನ ಸೇವೆ ರದ್ದುಗೊಳಿಸಲಾಗಿದೆ.

ಫೆ.4 ರಿಂದ ಫೆ.11ರವರೆಗೆ ಅರಸೀಕೆರೆ–ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿತ್ಯ ವಿಶೇಷ ಪ್ಯಾಸೆಂಜರ್‌ (07367) ಹುಬ್ಬಳ್ಳಿ–ಅರಸೀಕೆರೆ (07638) ರೈಲಿನ ಸೇವೆ ರದ್ದಾಗಿದೆ.

ಫೆ.4 ರಿಂದ 12ರವರೆಗೆ ಕೆಎಸ್‌ಆರ್‌ ಬೆಂಗಳೂರು–ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಎಕ್ಸ್ ಪ್ರೆಸ್‌ (12079) ಹಾಗೂ ಹುಬ್ಬಳ್ಳಿ–ಕೆಎಸ್‌ಆರ್‌ ಬೆಂಗಳೂರು ನಡುವೆ ಸಂಚರಿಸುವ (12080) ರೈಲಿನ ಸೇವೆಯನ್ನು ಹಾವೇರಿ–ಹುಬ್ಬಳ್ಳಿ ನಿಲ್ದಾಣಗಳ ನಡುವೆ ಸಂಚಾರ ರದ್ದುಗೊಳಿಸಲಾಗಿದೆ. ಬೆಂಗಳೂರು–ಹಾವೇರಿ ನಡುವೆ ಸಂಚರಿಸಲಿವೆ

ಫೆ.5 ರಿಂದ 10ರವರೆಗೆ ಅರಸೀಕೆರೆ– ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್‌ (07367) ರೈಲು ಹಾಗೂ ಹುಬ್ಬಳ್ಳಿ– ಅರಸೀಕೆರೆ (07368) ರೈಲು ಸಂಚಾರ ರಾಣೆಬೆನ್ನೂರಿನಲ್ಲಿ ಕೊನೆಯಾಗಲಿದೆ. ಹುಬ್ಬಳ್ಳಿ–ರಾಣೆಬೆನ್ನೂರು ನಡುವೆ ಸಂಚಾರ ರದ್ದಾಗಿದೆ.

ಫೆ.3 ರಿಂದ 10ರವರೆಗೆ ಕೊಚ್ಚುವೆಲಿ– ಹುಬ್ಬಳ್ಳಿ ಎಕ್ಸ್ ಪ್ರೆಸ್‌ (12778) ರೈಲಿನ ಸಂಚಾರ ಹಾವೇರಿ ನಿಲ್ದಾಣಕ್ಕೆ ಅಂತ್ಯವಾಗಲಿದೆ.

ಮಾರ್ಗ ಬದಲಾವಣೆ: ಫೆ.5 ರಿಂದ 12ರವರೆಗೆ ಹುಬ್ಬಳ್ಳಿ ಎಕ್ಸ್ ಪ್ರೆಸ್‌ (16544) ರೈಲು ಹಾವೇರಿ, ಹರಿಹರ ನಿಲ್ದಾಣಗಳಿಗೆ ಹೋಗುವುದಿಲ್ಲ. ಹುಬ್ಬಳ್ಳಿ, ಹೊಸಪೇಟೆ, ಕೊಟ್ಟೂರು, ದಾವಣಗೆರೆ ಮಾರ್ಗದಲ್ಲಿ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಂಪರ್ಕಾಧಿಕಾರಿ ಅನೀಶ್‌ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT