ಗುರುವಾರ , ಜನವರಿ 21, 2021
29 °C

ಐ.ಟಿ ಪಾರ್ಕ್‌ ಸಂಕೀರ್ಣ: ಮೂಲಸೌಕರ್ಯಕ್ಕೆ ಶೀಘ್ರ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ನಗರದ ಐಟಿ ಪಾರ್ಕ್ ಸಂಕೀರ್ಣಕ್ಕೆ ಮೂಲಸೌಕರ್ಯ ಒದಗಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದ (ಕಿಯೋನಿಕ್ಸ್) ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಸಿದ್ದರಾಮಪ್ಪ ಭರವಸೆ ನೀಡಿದರು.

ನಗರದ ಐಟಿ ಪಾರ್ಕ್‌ನಲ್ಲಿರುವ ಕಿಯೋನಿಕ್ಸ್ ಕಚೇರಿಗೆ ಸೋಮವಾರ ಭೇಟಿ ನೀಡಿ ತರಬೇತಿ ಚಟುವಟಿಕೆಗಳನ್ನು ವೀಕ್ಷಿಸಿದ ಅವರು, ಐಟಿ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಬಾಡಿಗೆದಾರರೊಂದಿಗೆ ಮಾತನಾಡಿದರು.

‘ಸಂಕೀರ್ಣದ ನಿರ್ವಹಣೆಯ ಜವಾಬ್ದಾರಿಯನ್ನು ಸರ್ಕಾರ ಇತ್ತೀಚೆಗೆ ಕಿಯೋನಿಕ್ಸ್‌ಗೆ ವಹಿಸಿದೆ. ವಾಹನ ನಿಲುಗಡೆ, ಸ್ವಚ್ಛತೆ ನಿರ್ವಹಣೆ, ವಿದ್ಯುತ್ ಪೂರೈಕೆ, ಭದ್ರತೆ ಸೇರಿದಂತೆ ಇತರ ಸೌಕರ್ಯಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಇಡೀ ಕಟ್ಟಡಕ್ಕೆ ಹೊಸ ರೂಪ ನೀಡಲಾಗುವುದು’ ಎಂದರು.

ಕಿಯೋನಿಕ್ಸ್ ಸಹಾಯಕ ವ್ಯವಸ್ಥಾಪಕಿ ಆವಟಿ, ಶೌಕತ್ ಅಲಿ ಮುಲ್ಲಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು