ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಸುಧಾರಿತ ಹನಿ ನೀರಾವರಿಗೆ ‘ಇಸ್ರೇಲ್‌ ಮಾದರಿ’

ನೀರು, ವಿದ್ಯುತ್ ಉಳಿತಾಯಕ್ಕೆ ವಿನೂತನ ತಂತ್ರಜ್ಞಾನ ಬಳಕೆ: ಹನಿ ನೀರಾವರಿಗೆ ಉತ್ತೇಜನ
Last Updated 19 ಜನವರಿ 2020, 9:57 IST
ಅಕ್ಷರ ಗಾತ್ರ

ಧಾರವಾಡ: ಆಧುನಿಕ ಕೃಷಿ ಪದ್ಧತಿ ವಿದ್ಯುತ್ ಚಾಲಿತ ಯಂತ್ರೋಪಕರಣಗಳನ್ನು ಬಹುವಾಗಿಯೇ ಅವಲಂಬಿಸಿದೆ. ಇದಕ್ಕೆ ಪೂರಕವಾಗಿ ‘ಇಸ್ರೇಲ್‌ ಮಾದರಿ’ ನೀರಾವರಿ ಪದ್ಧತಿ ಇಲ್ಲಿನ ಕೃಷಿ ಮೇಳದಲ್ಲಿ ಜನರನ್ನು ಆಕರ್ಷಿಸಿದೆ.

ಕೊಂಚ ದುಬಾರಿ ಎನಿಸಿದರೂ ಈ ಯಂತ್ರದಿಂದ ಸುಧಾರಿತ ಹನಿ ನೀರಾವರಿ ಪದ್ಧತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ.

ಇಸ್ರೇಲ್‌ ಮಾದರಿ ಹನಿ ನೀರಾವರಿ ಪದ್ಧತಿಯು ಸ್ವಯಂ ಚಾಲಿತ ವಿದ್ಯುತ್ ಬಳಕೆಯ ಯಂತ್ರವಾಗಿದ್ದು, ನೀರು, ರಸಗೊಬ್ಬರವನ್ನು ಶೋಧಿಸುವ ಕಾರ್ಯವನ್ನು ಮಾಡುತ್ತದೆ. ಶೋಧನೆಯಾದ ನಂತರವೇ ಹನಿ ನೀರಾವರಿ ಮುಖಾಂತರ ಬೆಳೆಗಳಿಗೆ ಹಾಯಿಸಲಾಗುತ್ತದೆ.

ಈ ಯಂತ್ರವನ್ನು ಮೊಬೈಲ್‌ ಜೊತೆಗೆ ಜೋಡಣೆಗೆ ಒಳಪಡಿಸಿದರೆ, ನೀರಾವರಿ ಮಾಹಿತಿ, ಎಚ್ಚರಿಕೆ ಕರೆಯನ್ನು ನೀಡುತ್ತದೆ. ನೀರಾವರಿ ಮಾಹಿತಿಯು ಸಮಯ, ವಾತಾವರಣ, ಉಪಗ್ರಹ ಶಿಫಾರಸ್ಸುಗಳನ್ನು ಆಧರಿಸಿ ಕಾರ್ಯನಿರ್ಹಿಸುತ್ತದೆ.

ಯಂತ್ರದ ಶೋಧನಾ ವ್ಯವಸ್ಥೆಯನ್ನು 4 ಭಾಗಗಳಲ್ಲಿ ವಿಂಗಡಿಸಲಾಗಿದ್ದು, ಅದನ್ನು ‘ಹೈಕ್ರೆಲ್‌ ಫಿಲ್ಟರ್‌’ ಎಂದು ಕರೆಯಲಾಗಿದೆ. ಇಲ್ಲಿ ಫಿಲ್ಟರ್‌ ಅನ್ನು ನಿರ್ವಹಣೆ ಮಾಡುವ ಅಗತ್ಯವಿಲ್ಲ. ಇದು ಸ್ವಯಂಚಾಲಿತವಾಗಿಯೇ ನಡೆಯುತ್ತದೆ.

ಇಸ್ರೇಲ್‌ ಡ್ರಿಪ್‌ ಸ್ಮಾರ್ಟ್‌ ಯಂತ್ರಕ್ಕೆ 4 ಎಕರೆಗೆ ಸರಿಸುಮಾರು ₹2–3 ಲಕ್ಷ ವೆಚ್ಚ ತಗಲುತ್ತದೆ. ಈ ಪದ್ಧತಿಯನ್ನು 5 ತಿಂಗಳಿಂದ ರಾಜ್ಯದ 8 ಸ್ಥಳಗಳಲ್ಲಿ ರೈತರು ಅಳವಡಿಸಿಕೊಂಡಿದ್ದಾರೆ. ಮೇಘ ಆಗ್ರೋಟೆಕ್ ಪ್ರೈವೆಟ್‌ ಲಿಮಿಟೆಡ್‌ನವರು ಈ ಯಂತ್ರವನ್ನು ಪರಿಚಯಿಸಿದ್ದು, ಬೆಂಗಳೂರಿನ ಜಿಕೆವಿಕೆಯಲ್ಲಿ ಬಳಕೆ ಮಾಡಿ ಪ್ರಾತ್ಯಾಕ್ಷಿಕೆ ತೋರಿಸಲಾಗಿದೆ.

ವಿದ್ಯುತ್ ಏರಿಳಿತದಿಂದಾಗಿ ಮೋಟರ್‌ಗಳು ಹಾಳಾಗುವ ಪ್ರಮಾಣವನ್ನು ಈ ಯಂತ್ರ ತಡೆಯಲಿದೆ. ಸಮಯಕ್ಕೆ ಸರಿಯಾಗಿ ನೀರು, ರಸಗೊಬ್ಬರದ ಬಳಕೆಯ ಮಾಹಿತಿ ದೊರಕುವುದರಿಂದ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂಬುದು ಆಯೋಜಕರು ಹೇಳುವ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT