ಶುಕ್ರವಾರ, ಆಗಸ್ಟ್ 6, 2021
21 °C

‌ಹುಬ್ಬಳ್ಳಿ: ಜೈನ ಸಮಾಜದ ಸತ್ಯಮತಿ ಮಾತಾಜಿ ಸಮಾಧಿ ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‌ಹುಬ್ಬಳ್ಳಿ: ಜೈನ ಸಮಾಜದ ಹಿರಿಯರು ಹಾಗೂ ನವಗ್ರಹ ತೀರ್ಥದ ಆಚಾರ್ಯ ಗುಣಧರನಂದಿ ಮಹಾರಾಜರ ಶಿಷ್ಯೆ ಆರ್ಯಿಕ ಸತ್ಯಮತಿ ಮಾತಾಜಿ ಅವರು ತಮ್ಮ 96ನೇ ವಯಸ್ಸಿನಲ್ಲಿ ಸಮಾಧಿ ಮರಣ ಹೊಂದಿದರು.

ಸತ್ಯಮತಿ ಮಾತಾಜಿ ಜೂನ್‌ 21ರಂದು ಆರ್ಯಿಕ ದೀಕ್ಷೆ ಪಡೆದು ನಿಯಮ ಸಲ್ಲೇಖನ ಧಾರಣೆ ಮಾಡಿದ್ದರು. ಬುಧವಾರ ಬೆಳಗಿನ ಜಾವ ಐದು ಗಂಟೆಗೆ ಹುಬ್ಬಳ್ಳಿ ತಾಲ್ಲೂಕಿನ ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ ಸಮಾಧಿ ಮರಣ ಹೊಂದಿದರು. ಸತ್ಯಮತಿ ಮಾತಾಜಿ ಹಿಂದಿನ ಆರು ತಿಂಗಳುಗಳಿಂದ ಪೂರ್ಣ ಆಹಾರವನ್ನು ತ್ಯಜಿಸಿ, ಅಲ್ಪ ಆಹಾರ ಸೇವಿಸುತ್ತಿದ್ದರು. ಸದಾ ಕಾಲ ಜಪತಪಗಳಲ್ಲಿ ತೊಡಗಿರುತ್ತಿದ್ದರು.

ಹುಬ್ಬಳ್ಳಿಯ ದಿಗಂಬರ ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ಉಪಾಧ್ಯಕ್ಷ ವಿಮಲ್ ತಾಳಿಕೋಟಿ, ಮಾಜಿ ಅಧ್ಯಕ್ಷ ಶಾಂತಿನಾಥ ಹೋತಪೇಟಿ, ನೀಲೇಶ್ ಜೈನ ಸೇರಿದಂತೆ ಸಮಾಜದ ಪ್ರಮುಖರು ಕ್ಷೇತ್ರಕ್ಕೆ ಭೇಟಿ ನೀಡಿ ಮಾತಾಜಿಯ ಅಂತಿಮ ದರ್ಶನ ಪಡೆದು ಶ್ರದ್ಧಾ ನಮನ ಅರ್ಪಿಸಿದರು. 10 ಗಂಟೆ ಸುಮಾರಿಗೆ ವರೂರಿನ ಧರ್ಮಸೇನ ಭಟ್ಟಾರಕರ ಮಾರ್ಗದರ್ಶನದಲ್ಲಿ ಅಂತ್ಯಕ್ರಿಯೆ ನಡೆಯಿತು. ವರೂರು, ಛಬ್ಬಿ ಹಾಗೂ ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ಜನ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು