ಸೋಮವಾರ, ಸೆಪ್ಟೆಂಬರ್ 26, 2022
21 °C

ಬೆಳೆಹಾನಿ: ಶೀಘ್ರ ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಶೀಘ್ರ ಪರಿಹಾರ ವಿತರಿಸುವಂತೆ ಆಗ್ರಹಿಸಿ ಜೆಡಿಎಸ್‌ ಕಾರ್ಯಕರ್ತರು ನಗರದ ಮಿನಿ ವಿಧಾನಸೌಧದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

‘ಹೆಸರು ಬೆಳೆಗೆ ವಿಮೆ ತುಂಬಿಸಿಕೊಳ್ಳುವ ಅವಧಿ ವಿಸ್ತರಿಸಬೇಕು. ಹಾನಿಯಾದ ಹೆಸರು ಬೆಳೆಗೆ ಎಕರೆಗೆ ₹25,000 ಪರಿಹಾರ ನೀಡಬೇಕು. ಹಾನಿಗೊಂಡ ಮನೆಗಳಿಗೆ ಪರಿಹಾರ ವಿತರಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು. ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹೊಸಕೇರಿ, ಹುಬ್ಬಳ್ಳಿ ಸೆಂಟ್ರಲ್‌ ಘಟಕದ ಅಧ್ಯಕ್ಷ ರಾಜು ನಾಯಕವಾಡಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ, ಗಂಗಾಧರ ಪೆರೂರ, ಸುಭಾಸ ಅವ್ವನ್ನವರ, ಮಹಾಂತೇಶ ಗಂಗಾಧರಮಠ, ಸರಸ್ವತಿ ಕಟ್ಟಿಮನಿ, ಎಸ್.ಸಿ. ಗಾಮನಗಟ್ಟಿ, ಎಸ್.ಆರ್.ಪಾಟೀಲ, ವೀರೇಶ ಕುಂಬಾರ, ಗೂಳಬ್ಬ ಹಬ್ಬಣ್ಣವರ, ಮಂಜುನಾಥ ಹಡಪದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.