ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಘಟಗಿ: ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

Last Updated 8 ನವೆಂಬರ್ 2020, 15:50 IST
ಅಕ್ಷರ ಗಾತ್ರ

ಕಲಘಟಗಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಭಾನುವಾರ ಸುಮಾರು ₹7.76 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆಶಾಸಕ ಸಿ.ಎಂ ನಿಂಬಣ್ಣವರ ಮತ್ತು ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ‘ಕಾಮಗಾರಿಗಳನ್ನು ನಡೆಸುವಾಗ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಕೆಲಸ ವಿಳಂಬವಾಗಬಾರದು. ಅಧಿಕಾರಿಗಳು ಕೂಡ ಗಮನ ಹರಿಸಬೇಕು’ ಎಂದರು.

ಹಿರೇಹೊನ್ನಳ್ಳಿ ಗ್ರಾಮದಲ್ಲಿ ₹16 ಲಕ್ಷ ಅನುದಾನದಲ್ಲಿ ಅಂಗನವಾಡಿ ಕಟ್ಟಡ, ದುಮ್ಮವಾಡದಲ್ಲಿ ₹11 ಲಕ್ಷದಲ್ಲಿಪ್ರಾಥಮಿಕ ಶಾಲಾ ಕೊಠಡಿ, ₹50 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆ, ₹1 ಕೋಟಿಯಲ್ಲಿಪಡುಬಿದ್ರಿ-ಚಿಕ್ಕಾಲುಗುಡ್ಡ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ, ₹4 ಕೋಟಿಯಲ್ಲಿಚಳಮಟ್ಟಿ- ಬಣದೂರ ರಸ್ತೆ ಸುಧಾರಣೆ, ಗುಡಿಹಾಳ ಗ್ರಾಮದಲ್ಲಿ ₹22 ಲಕ್ಷದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ, ₹60 ಲಕ್ಷ ವೆಚ್ಚದಲ್ಲಿಗಳಗಿ ಹುಲಕೊಪ್ಪ-ಕರ್ಲಕೊಪ್ಪ ರಸ್ತೆ ಸುಧಾರಣೆ, ₹22 ಲಕ್ಷದಲ್ಲಿ ಪ್ರಾಥಮಿಕ ಶಾಲಾ ಕಟ್ಟಡ, ₹11 ಲಕ್ಷ ಡಿಪಿಇಪಿ ಪ್ರಾಥಮಿಕ ಶಾಲೆ ಕೊಠಡಿ, ₹15.75 ಲಕ್ಷದಲ್ಲಿ ಸರ್ಕಾರಿ ಪ್ರೌಢಶಾಲೆ ಕೊಠಡಿ ನಿರ್ಮಾಣ, ₹16 ಲಕ್ಷದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ₹40 ಲಕ್ಷದಲ್ಲಿಹಸರಂಬಿ- ಗುಳೇದಕೊಪ್ಪ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದರು.

ತಾಲ್ಲೂಕು ಪಂಚಾಯ್ತಿಅಧ್ಯಕ್ಷೆ ಸುನೀತಾ ಮ್ಯಾಗಿನಮನಿ, ಸದಸ್ಯೆ ಮಂಜುಳಾ ಲಮಾಣಿ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಶೆರೇವಾಡ, ನರೇಶ ಮಲೆನಾಡು, ವಜ್ರಕುಮಾರ ಮಾದನಬಾವಿ, ನಿಂಗಪ್ಪ ಸುತಗಟ್ಟಿ, ಪಿಡಬ್ಲ್ಯೂಡಿ ಅಧಿಕಾರಿ ಬಸವರಾಜ ಬಾಗೇವಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT