ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಯುರ್ವೇದದಲ್ಲಿ ಸಂಶೋಧನೆ ಹೆಚ್ಚಲಿ’

Published 10 ನವೆಂಬರ್ 2023, 14:23 IST
Last Updated 10 ನವೆಂಬರ್ 2023, 14:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಆಯುರ್ವೇದ ತಜ್ಞರು, ತಮ್ಮ ಸಂಪ್ರದಾಯಿಕ ಚಿಕಿತ್ಸಾ ವಿಧಾನಗಳಲ್ಲಿ ಆಧುನಿಕ ತಂತ್ರಜ್ಞಾನ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಳ್ಳುವ ಅವಶ್ಯವಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಶರ್ಮಾ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯಲ್ಲಿನ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಆಯುರ್ವೇದ ಚಿಕಿತ್ಸೆ ಹಳೆಯದು ಹಾಗೂ ಅವೈಜ್ಞಾನಿಕವಾದುದು ಎಂದು ಹೇಳುವರು ಇಂದಿಗೂ ಇದ್ದಾರೆ. ಹೀಗಾಗಿ ನೂತನ ಸಂಶೋಧನೆ ಮಾಡಿ ಆಧುನಿಕ ತಂತ್ರಜ್ಞಾನ ಪದ್ಧತಿ ಮೂಲಕ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ’ ಎಂದರು.

ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ ಬನ್ನಿಗೋಳ ಅವರು, ‘ಇತ್ತೀಚಿನ ದಿನಗಳಲ್ಲಿ ರೋಗಗಳನ್ನು ನಿವಾರಿಸುವುದಕ್ಕಿಂತ ರೋಗಗಳು ಬಾರದಂತೆ ತಡೆಗಟ್ಟಿ ಆರೋಗ್ಯ ಕಾಪಾಡಿಕೊಳ್ಳುವ ಮುಂಜಾಗೃತಿ ಹೆಚ್ಚುತ್ತಿದೆ. ಇದರಲ್ಲಿ ಆಯುರ್ವೇದದ ಪಾತ್ರ ಹೆಚ್ಚಿದೆ’ ಎಂದರು. 

ಮೈಸೂರಿನ ಶಾರದಾ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಹನುಮಂತಾಚಾರ್ಯ ಜೋಶಿ, ಸಂಸ್ಥೆಯ ಪ್ರಾಚಾರ್ಯ ಡಾ.ಚರಂತಯ್ಯ ಹಿರೇಮಠ ಮಾತನಾಡಿದರು.

ಡಾ.ಗೌರೀಶ ಅಸೂಟಿ ಸ್ವಾಗತಿಸಿದರು. ಡಾ.ಸೋಮಶೇಖರ ಹುದ್ದಾರ ವಂದಿಸಿದರು.  ಸೃಷ್ಟಿ ರೇವಡಿಗರ್ ಹಾಗೂ ಅನಿತಾ ಅವರು ನೃತ್ಯ ರೂಪಕ ಪ್ರಸ್ತುತಪಡಿಸಿದರು. ಸಾಕ್ಷಿ ಪಟವರ್ಧನ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT