ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ವಿತರಕ ಯಂತ್ರ ಉದ್ಘಾಟನೆ

Last Updated 14 ಜೂನ್ 2021, 4:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಯಂಗ್‌ ಇಂಡಿಯನ್ಸ್‌ಹುಬ್ಬಳ್ಳಿ ಶಾಖೆ ವತಿಯಿಂದ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಮಾಸ್ಕ್‌ ವಿತರಿಸುವ ಯಂತ್ರದ (ಮಾಸ್ಕ್‌ ವೆಂಡಿಂಗ್‌)ಉದ್ಘಾಟನೆಯನ್ನುಭಾನುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ ಶೆಟ್ಟರ್‌ ನೆರವೇರಿಸಿದರು. ಮಹಾನಗರ ಪಾಲಿಕೆ ಆವರಣದಲ್ಲಿ ಯಂತ್ರ ಅಳವಡಿಸಲಾಗಿದೆ.

‘ಮೂರು ಪದರು ಇರುವ ಮಾಸ್ಕ್‌ ಧರಿಸುವುದು ಉತ್ತಮ ಎಂದು ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶನ ನೀಡಿದೆ.ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಿದರೆ ಮಾತ್ರ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯಿಂದ₹ 2ಕ್ಕೆ ಯಂತ್ರದ ಮೂಲಕ ಮಾಸ್ಕ್‌ ವಿತರಿಸಲಾಗುತ್ತಿದೆ.ಸಾರ್ವಜನಿಕರು ಇದರ ಪ್ರಯೋಜನ ಪಡೆದು, ಸೋಂಕು ನಿಯಂತ್ರಿಸಬೇಕು’ ಎಂದು ಯಂಗ್‌ ಇಂಡಿಯನ್‌ ಸಂಸ್ಥಾಪಕ ಮುಖ್ಯಸ್ಥ ಡಾ. ಶ್ರೀನಿವಾಸ ಜೋಶಿ ಹೇಳಿದರು.

’ಮುಂಬೈನಿಂದ 12 ಯಂತ್ರಗಳನ್ನು ಖರೀದಿಸಲಾಗಿದೆ.ಒಂದೊಂದು ಯಂತ್ರದಲ್ಲಿ 100 ಮಾಸ್ಕ್‌ಗಳು ಇರುತ್ತವೆ. ಯಂತ್ರದ ಒಳಗೆ ₹ 2 ನಾಣ್ಯ ಹಾಕಿದರೆ, ಮೂರು ಪದರಿನ ಮಾಸ್ಕ್‌ ದೊರೆಯುತ್ತದೆ. ಒಂದೊಂದು ಯಂತ್ರಕ್ಕೆ ₹20 ಸಾವಿರ ವೆಚ್ಚವಾಗಿದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಯಶಸ್ವಿಯಾದರೆ ರಾಜ್ಯದಾದ್ಯಂತ ಪ್ರಮುಖ ಸ್ಥಳಗಳಲ್ಲಿ ಅಳವಡಿಸುತ್ತೇವೆ’ ಎಂದು ತಿಳಿಸಿದರು.

ಸಂಸ್ಥೆಯ ಮುಖ್ಯಸ್ಥ ಡಾ. ಸಚಿನ ಟೆಂಗಿನಕಾಯಿ ‘ನಗರದ ಬಸ್‌ ನಿಲ್ದಾಣ, ಎಪಿಎಂಸಿ, ಮಾರುಕಟ್ಟೆ ಪ್ರದೇಶ ಹೀಗೆ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಯಂತ್ರಗಳನ್ನು ಅಳವಡಿಸಲಾಗುವುದು.ಅಗತ್ಯವಿದ್ದರು ಕಡಿಮೆ ದರದಲ್ಲಿ ಮಾಸ್ಕ್‌ ಪಡೆಯಬಹುದು’ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ಡಾ. ಐಶ್ವರ್ಯಾ, ರಾಹುಲ್‌ ಸುರಾನಾ, ಅರುಣ ಅಗರವಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT