ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮಗುರು ಜಿಲಾನಿ

Last Updated 1 ಆಗಸ್ಟ್ 2019, 11:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಉತ್ತರ ಪ್ರದೇಶದ (ಕಿಚೋಚಾ ಶರೀಫ್‌) ಮುಸ್ಲಿಂ ಧರ್ಮಗುರು ಶೈಖುಲ್ ಇಸ್ಲಾಂ ಅಲ್ಲಾಮಾ ಸೂಫಿ ಸೈಯದ್ ಮೊಹಮ್ಮದ ಮದನಿ ಮೀಯಾ ಅಷ್ರಫಿ ಜಿಲಾನಿ ಅವರು, ಸಾರ್ವಜನಿಕ ಪ್ರವಚನ ಹಾಗೂ ಸಂವಾದ ಕಾರ್ಯಕ್ರಮಗಳ ಮೂಲಕ, ವಿಶ್ವಶಾಂತಿ ಹಾಗೂ ಸಹೋದರತೆಯ ಸಂದೇಶಗಳನ್ನು ಸಾರುತ್ತಿದ್ದಾರೆ’ ಎಂದು ಮದನಿ ಫೌಂಡೇಷನ್‌ ಅಧ್ಯಕ್ಷ ಮಹ್ಮದ ಯೂಸುಫ್ ಮುಗದ ಹೇಳಿದರು.

‘ಹನ್ನೆರಡು ವರ್ಷಗಳ ಬಳಿಕ, ಜಿಲಾನಿ ಅವರು ತಮ್ಮ ಉತ್ತರಾಧಿಕಾರಿ ಹಜರತ್ ಸೈಯದ್ ಮೊಹಮ್ಮದ ಹಮ್ಝಾ ಅಶ್ರಫ್ ಅವರೊಂದಿಗೆ ಹುಬ್ಬಳ್ಳಿಗೆ ಬಂದಿದ್ದಾರೆ. ಸಹೋದರತೆ ಹಾಗೂ ಶೈಕ್ಷಣಿಕ ಕ್ರಾಂತಿಗಾಗಿ ಸ್ಥಾಪಿಸಿರುವ ಅಂತರರಾಷ್ಟ್ರೀಯ ಶೈಖುಲ್ ಇಸ್ಲಾಂ ಟ್ರಸ್ಟ್ ಹಾಗೂ ಮುಹದ್ದಿಸೇ ಆಝಮ್ ಮಿಷನ್ ಸಹಯೋಗದಲ್ಲಿ ಜಿಲಾನಿ ಅವರ ಪ್ರವಚನವನ್ನು ಜುಲೈ 31 ಹಾಗೂ ಆಗಸ್ಟ್ 1ರಂದು ಆಯೋಜಿಸಿ, ಸಾರ್ವನಿಕರಿಗೆ ಅವರ ಸಂದೇಶ ತಲುಪಿಸುವ ಕೆಲಸ ಮಾಡಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿಶ್ವದಾದ್ಯಂತ ಪ್ರವಾಸ ಕೈಗೊಂಡು ಪ್ರವಚನ ನೀಡುತ್ತಿರುವ ಜಿಲಾನಿ ಅವರಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅನುಯಾಯಿಗಳಿದ್ದಾರೆ. ಇದೀಗ ಹುಬ್ಬಳ್ಳಿಗೆ ಬಂದಿರುವ ಅವರು ದೇಶದಾದ್ಯಂತ ಶೈಖುಲ್ ಇಸ್ಲಾಂ ಟ್ರಸ್ಟ್‌ ಸ್ಥಾಪಿಸಿ, ಅದರ ಶಾಖೆಗಳನ್ನು ವಿಸ್ತರಿಸಲು ಕರ್ನಾಟಕ ಹಾಗೂ ಹೈದರಾಬಾದ್ ಪ್ರವಾಸ ಕೈಗೊಂಡಿದ್ದಾರೆ. ಮುಂದೆ ಬೆಳಗಾವಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಅವರ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಯೀಮುದ್ದೀನ ಶೇಕ್, ಸೈಯದ ಅಹ್ಮದ ರಜಾ ಸರಖಾಜಿ, ಸಮೀಯುಲ್ಲಾ ಬೆಳಗಾಂವ, ನಿಸಾರ ಅಹ್ಮದ ಛಗನ್ ಹಾಗೂ ಹಫೀಜ್ ಷಾರೀಕ್ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT