ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಮಸೀದಿಗಳಿಂದಲೇ ಶಬ್ದಮಾಲಿನ್ಯ: ಬೆಲ್ಲದ

Last Updated 9 ಏಪ್ರಿಲ್ 2022, 16:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಿಗದಿತ ಡೆಸಿಮಲ್‌ ಪ್ರಮಾಣಕ್ಕಿಂತ ಹೆಚ್ಚು ಶಬ್ದ ಹೊರಡಿಸುತ್ತಿರುವ ಮಸೀದಿಗಳ ಧ್ವನಿವರ್ಧಕಗಳು ಬಂದ್‌ ಆಗಬೇಕು’ ಎಂದು ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು.

ಹುಬ್ಬಳ್ಳಿಯ ನವನಗರದಲ್ಲಿ ಗುರುವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂಜಾನೆ 3.30ಕ್ಕೆ ಮಸೀದಿಗಳಿಂದ ಹೆಚ್ಚು ಡೆಸಿಬಲ್‌ ಪ್ರಮಾಣದ ಶಬ್ದ ಹೊರಡುತ್ತದೆ. ಜನರು ಮನೆಯಲ್ಲಿ ಅಲರಾಂ ಇಟ್ಟುಕೊಂಡು ಬೆಳಿಗ್ಗೆ ಏಳುತ್ತಾರೆ. ದೇವರ ಮೇಲೆ ಭಕ್ತಿ ಇದ್ದವರು ಪೂಜಿಸುತ್ತಾರೆ. ಹೀಗಿದ್ದಾಗ ಮಸೀದಿಗಳಲ್ಲಿ ಧ್ವನಿವರ್ಧಕ ಅವಶ್ಯವಿಲ್ಲ’ ಎಂದು ಹೇಳಿದರು.

‘ಮಸೀದಿಗಳಲ್ಲಿ ಧ್ವನಿವರ್ಧಕ ಬಂದ್ ಆದರೆ, ಹಿಂದೂ ದೇವಸ್ಥಾನಗಳಲ್ಲಿ ತಾನಾಗೇ ಧ್ವನಿವರ್ಧಕ ಬಳಕೆ ಬಂದ್ ಆಗುತ್ತದೆ. ಹಾಗೆ ನೋಡಿದರೆ, ಹೆಚ್ಚು ದೇವಾಲಯಗಳಲ್ಲಿ ಧ್ವನಿವರ್ಧಕ ಬಳಕೆ ಮಾಡುವುದಿಲ್ಲ. ವರ್ಷಕ್ಕೊಮ್ಮೆ ಗಣೇಶ ಹಬ್ಬದಲ್ಲಿ ಅನುಮತಿ ಪಡೆದು, ಧ್ವನಿವರ್ಧಕ ಬಳಸುತ್ತಾರೆ. ಶಬ್ದ ಮಾಲಿನ್ಯ ಆಗುತ್ತಿರುವುದು ಮಸೀದಿಗಳಿಂದ’ ಎಂದು ಹೇಳಿದರು.

‘ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದ್ದರೂ, ಸರ್ಕಾರ ತನ್ನ ಕಾರ್ಯವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಬೇಕು. ಎಲ್ಲದಕ್ಕೂ ನ್ಯಾಯಾಲಯದ ಮೊರೆ ಹೋಗಲಾಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT