ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ವಿರುದ್ಧ ವಾಟ್ಸ್‌ಆ್ಯಪ್‌ ಸಂದೇಶ ಹಂಚಿಕೆ; ನೌಕರಗೆ ನೋಟಿಸ್‌

Published 17 ಜನವರಿ 2024, 4:59 IST
Last Updated 17 ಜನವರಿ 2024, 4:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯ ಸರ್ಕಾರದ ವಿರುದ್ಧ ಬರೆದಿದ್ದ  ಸಂದೇಶವೊಂದನ್ನು ಪಾಲಿಕೆ ನೌಕರರೊಬ್ಬರು ತಮ್ಮ ಕಚೇರಿ ಸಿಬ್ಬಂದಿಯಿದ್ದ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಹಂಚಿಕೆ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪಾಲಿಕೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಂಕರ ಕುಡ್ಲಣ್ಣವರ ಅವರು, ಹಂಚಿಕೆಯಾಗಿದ್ದ ಸಂದೇಶವನ್ನು ‘ಎಚ್‌ಡಿಎಂಸಿ ಯೂನಿಯನ್‌’ ಗ್ರೂಪ್‌ಗೆ ಹಂಚಿಕೆ ಮಾಡಿದ್ದರು. ಅದನ್ನು ಸ್ಕ್ರೀನ್‌ಶಾಟ್‌ ತೆಗೆದು ಸಿಬ್ಬಂದಿಯೊಬ್ಬರು ಇತರರಿಗೆ ಕಳಹಿಸಿದ್ದಾರೆ.

ಸರ್ಕಾರಿ ಉದ್ಯೋಗಿಯಾಗಿರುವ ಶಂಕರ ಅವರು, ಸರ್ಕಾರದ ವಿರುದ್ಧದ ಬರಹವನ್ನು ಹಂಚಿಕೆ ಮಾಡಿರುವ ಕುರಿತು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರು ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ.

ಸಂದೇಶದಲ್ಲಿ ಏನಿದೆ?: ‘ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಲ್ಲಿ ಜ. 22ರಂದು ವಿಶೇಷಪೂಜೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಾಣಿಕೆ ಡಬ್ಬಿಯಲ್ಲಿ ಅಧಿಕ ಹಣ ಸಂಗ್ರಹವಾಗಬೇಕು, ಅದನ್ನು ಲೋಕಸಭೆ ಚುನಾವಣೆಗೆ ಹಾಗೂ ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುವ ತಂತ್ರವಾಗಿದೆ. ನಮ್ಮ ಹಣವನ್ನು ಇವರು ಬೇರೆ ಧರ್ಮದವರಿಗೆ ಕೊಡುವ ಹಾಗೂ ಚುನಾವಣೆಗೆ ಬಳಸಿಕೊಳ್ಳುವ ದರಿದ್ರ ಸರ್ಕಾರದ ತಂತ್ರಕ್ಕೆ ಬಲಿಯಾಗಬೇಡಿ. ಧರ್ಮವನ್ನು ರಕ್ಷಿಸಿ, ಮೋಸದ ರಾಜಕೀಯಕ್ಕೆ ಬಲಿಯಾಗಬೇಡಿ’ ಎನ್ನುವ ಸಂದೇಶ ಹಂಚಿಕೆ ಮಾಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಯುಕ್ತ ಈಶ್ವರ ಉಳ್ಳಾಗಡ್ಡಿ, ‘ಹಂಚಿಕೆಯಾಗಿರುವ ಸಂದೇಶವನ್ನು ಅವರು ಮರು ಹಂಚಿಕೆ ಮಾಡಿದ್ದಾರೆ. ಆಕಸ್ಮಿಕವಾಗಿ ಹಂಚಿಕೆಯಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ನೋಟಿಸ್‌ ನೀಡಲಾಗಿದೆ. ಅಗತ್ಯವಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT