ಧಾರವಾಡ: ಖರೀದಿಸಿದ ಕೆಲ ದಿನಗಳಲ್ಲಿ ದೋಷ ಕಂಡುಬಂದ ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು ಸರಿಪಡಿಸಿಕೊಡದ ಪ್ರಕರಣದಲ್ಲಿ ಬೆಂಗಳೂರಿನ ಓಲಾ ಎಲೆಕ್ಟ್ರಿಕ್ ಮೊಬೈಲಿಟಿ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗವು ದಂಡ ವಿಧಿಸಿದೆ. ಒಂದು ತಿಂಗಳೊಳಗೆ ವಾಹನ ದುರಸ್ತಿ ಮಾಡಿಸಿಕೊಡಬೇಕು ಎಂದು ಆದೇಶಿಸಿದೆ.

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಈ ಆದೇಶ ನೀಡಿದ್ದಾರೆ. ಗ್ರಾಹಕನಿಗೆ ಪರಿಹಾರ ₹ 50 ಸಾವಿರ, ಪ್ರಕರಣದ ವೆಚ್ಚ ₹ 5 ಸಾವಿರ ನೀಡಬೇಕು. ಆದೇಶವಾದ ಒಂದು ತಿಂಗಳೊಳಗೆ ವಾಹನವನ್ನು ದುರಸ್ತಿ ಮಾಡಿಕೊಡಬೇಕು. ತಪ್ಪಿದಲ್ಲಿ, ವಾಹನ ಖರೀದಿಗೆ ಪಾವತಿಸಿದ್ದ ಮೊತ್ತವನ್ನು (₹ 1.12 ಲಕ್ಷ) ಆದೇಶವಾದ 45 ದಿನಗಳೊಳಗೆ ಗ್ರಾಹಕನಿಗೆ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ?: ಹುಬ್ಬಳ್ಳಿಯ ಶಾಂತಿನಗರದ ನಿವಾಸಿ ಸಾಕರ್ ಖಾದೆರ್ ಅವರು ಓಲಾ ಕಂಪನಿಯ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಓಲಾ ಎಸ್-1 ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿಸಿದ್ದರು. ₹ 1.12 ಲಕ್ಷ ಪಾವತಿಸಿದ್ದರು. ಖರೀದಿಸಿದ ಕೆಲ ದಿನಗಳಲ್ಲಿ ವಾಹನದಲ್ಲಿ ದೋಷ ಕಂಡು ಬಂದವು. ಸರಿಪಡಿಸಿಕೊಡುವಂತೆ ಗ್ರಾಹಕ ಮನವಿ ಮಾಡಿದರೂ ಸರ್ವಿಸ್ ಸ್ಟೇಷನ್ನವರು ಸ್ಪಂದಿಸಿರಲಿಲ್ಲ. ಕಂಪನಿ ವಿರುದ್ಧ ಅ. 3ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.