ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಪ್ರೀತಿಯಿಂದ ಕಲೆಯನ್ನು ಸ್ವಂತವಾಗಿಸಿಕೊಳ್ಳಿ: ಎಂ.ಎಸ್. ಹೊಸಹಳ್ಳಿಮಠ

ಸುಶೀಲ ಕಮ್ಮಾರ ಅವರ ‘ಸೊಬಗು’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
Published 23 ಮೇ 2023, 11:51 IST
Last Updated 23 ಮೇ 2023, 11:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಾವು ಹೆಚ್ಚು ಪ್ರೀತಿಸಿದ್ದು ನಮ್ಮದಾಗುತ್ತದೆ. ಕಲೆಯಲ್ಲಿ ಇದು ಮುಖ್ಯ. ಚಿತ್ರ ರಚನೆಗೆ ಮೊದಲ ಆ ವಸ್ತು, ವಾಸ್ತವದ ಮೇಲೆ ಕಲಾವಿದನಿಗೆ ಪ್ರೀತಿ ಇರಬೇಕು. ಪ್ರೀತಿಯಿಂದ ಕಲೆಯನ್ನು ಸ್ವಂತವಾಗಿಸಿಕೊಳ್ಳಬೇಕು’ ಎಂದು ಇಲ್ಲಿನ ವಿಜಯಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದ ಉಪನ್ಯಾಸಕ ಎಂ.ಎಸ್. ಹೊಸಹಳ್ಳಿಮಠ ಹೇಳಿದರು.

ಇಲ್ಲಿನ ಹೊಸ ಬಸ್‌ ನಿಲ್ದಾಣದ ಹಿಂದುಗಡೆ ಇರುವ ಬೆನಕ ಆರ್ಟ್‌ ಗ್ಯಾಲರಿಯಲ್ಲಿ  ಮಂಗಳವಾರ ನಡೆದ ಸುಶೀಲ ಕಮ್ಮಾರ ಅವರ ‘ಸೊಬಗು’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಸ್ತಿ ಅಂತಸ್ತುಗಳಿಗೆ ವಾರಸುದಾರರು ಎಂದು ಕರೆಸಿಕೊಳ್ಳುವುದಕ್ಕಿಂತ, ಡಿ.ಬಿ. ಹಾಲಬಾವಿ, ಡಾ. ಎಂ.ವಿ. ಮಿಣಜಗಿ ಅವರಂತಹ ಮಹಾನ್‌ ಕಲಾವಿದರ ವಾರಸುದಾರರು ನಾವು ಎನ್ನಲು ಹೆಮ್ಮೆಯಿದೆ ಎಂದರು.

ಚಲನಚಿತ್ರ ಸೆನ್ಸಾರ್ ಬೋರ್ಡ್‌ ಸ್ಕ್ರೀನಿಂಗ್‌ ಸಮಿತಿಯ ಸದಸ್ಯ ಎಚ್.ಎಸ್. ಕಿರಣ ಮಾತನಾಡಿ, ಸಂಗೀತ, ಸಾಹಿತ್ಯ, ನಾಟಕ, ನೃತ್ಯದಂತಹ ಕಲಾ ಪ್ರಕಾರದಲ್ಲಿ ತೊಡಗಿಸಿಕೊಂಡವರು ತಮ್ಮ ಬೇಡಿಕೆಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳ ಮುಂದಿಟ್ಟು, ಛಲ ಬಿಡದೆ ಈಡೇರಿಸಿಕೊಳ್ಳುತ್ತಾರೆ. ಚಿತ್ರಕಲಾ ಕ್ಷೇತ್ರದಲ್ಲಿ ಇಂತಹ ಗಟ್ಟಿ ಧ್ವನಿ ಕೇಳಿ ಬರದಿರುವುದು ಬೇಸರದ ಸಂಗತಿ. ಆರ್ಟ್‌ ಗ್ಯಾಲರಿ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕಿದೆ ಎಂದರು.

ಹಿರಿಯ ಕಲಾವಿದ ಎಲ್‌.ಸಿ. ಬೆಲ್ಲದ ಕಾರ್ಯಕ್ರಮ ಉದ್ಘಾಟಿಸಿದರು. ಬೆನಕ್ ಆರ್ಟ್‌ ಗ್ಯಾಲರಿಯ ಆರ್‌ಬಿ. ಗರಗ ಅಧ್ಯಕ್ಷತೆ ವಹಿಸಿದ್ದರು. ಜಿ.ಆರ್. ಮಲ್ಲಾಪುರ ಕಾರ್ಯಕ್ರಮ ನಿರ್ವಹಿಸಿದರು.

ಹುಬ್ಬಳ್ಳಿಯ ಬೆನಕ ಆರ್ಟ್‌ ಗ್ಯಾಲರಿಯಲ್ಲಿ ಮಂಗಳವಾರ ನಡೆದ ಸುಶೀಲ ಕಮ್ಮಾರ ಅವರ ‘ಸೊಬಗು’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಗಣ್ಯರು ಕಲಾಕೃತಿಗಳನ್ನು ವೀಕ್ಷಿಸಿದರು
ಹುಬ್ಬಳ್ಳಿಯ ಬೆನಕ ಆರ್ಟ್‌ ಗ್ಯಾಲರಿಯಲ್ಲಿ ಮಂಗಳವಾರ ನಡೆದ ಸುಶೀಲ ಕಮ್ಮಾರ ಅವರ ‘ಸೊಬಗು’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಗಣ್ಯರು ಕಲಾಕೃತಿಗಳನ್ನು ವೀಕ್ಷಿಸಿದರು

ನೀಲವರ್ಣದ ನಿಸರ್ಗ ‘ಸೊಬಗು’ ಅಕ್ರಿಲಿಕ್‌ ಬಣ್ಣಗಳನ್ನು ಬಳಸಿ ಸುಶೀಲ ಕಮ್ಮಾರ ರಚಿಸಲಾದ ಚಿತ್ರಗಳು ಪ್ರದರ್ಶನಕ್ಕಿದ್ದವು. ನೀಲವರ್ಣದಲ್ಲಿ ಮೂಡಿ ಬಂದ ಪ್ರಕೃತಿಯ ಹಲವು ಚಿತ್ರಗಳು ಚಿತ್ರಕಲಾ ಪ್ರದರ್ಶನದ ಶೀರ್ಷಿಕೆಯಂತೆಯೇ ‘ಸೊಬಗಿನಿಂದ’ ಕೂಡಿದ್ದವು. ಕೆಲವು ಮಹಿಳಾ ಸಂವೇದನೆಯನ್ನು ಅಭಿವ್ಯಕ್ತಿಸುವ ಚಿತ್ರಗಳೂ ಕಂಡುಬಂದವು. ಕಲಾವಿದೆ ಸುಶೀಲ ಕಮ್ಮಾರ ಮಾತನಾಡಿ, ಪ್ರಕೃತಿ ನನ್ನ ಚಿತ್ರಗಳಿಗೆ ಪ್ರೇರಣೆ. ಅಲ್ಲಿನ ಸೌಂದರ್ಯಗಳನ್ನೇ ಕ್ಯಾನ್ವಾಸ್‌ ಮೇಲೆ ಮೂಡಿಸುತ್ತೇನೆ. ಚಿತ್ರಕ್ಕೆ ಚೂಕ್ತವಾದ ಉತ್ತಮ ಸ್ಥಳಗಳಿಗೆ ಸುತ್ತಾಡಿ ಚಿತ್ರರಚನೆಯಲ್ಲಿ ತೊಡಗುವುದು ಮಹಿಳೆಗೆ ಸವಾಲು. ಆದರೂ ಅವಕಾಶ ಸಿಕ್ಕಾಗ ನಾನು ಬಳಸಿಕೊಂಡೆ. ಈ ಹಂತಕ್ಕೆ ತಲುಪಲು ನನ್ನೊಳಗೆ ಗಟ್ಟಿಯಾಗಿ ಉಳಿದ ಛಲವೇ ಕಾರಣ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT