ಕುಂದಗೋಳ: ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಮನಗರದಲ್ಲಿ ನಡೆದ ವಿದ್ಯಾರ್ಥಿ ಜಾನಪದ ಲೋಕೋತ್ಸವ-2026 ಕಾರ್ಯಕ್ರಮದಲ್ಲಿ ಮುತ್ತಪ್ಪ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವಿವಿಧ ಸಾಧಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪುಫುಲ್ಲ ರಘುರಾಮ ಶೆಟ್ಟಿ ಹಾಗೂ ವಡ್ಡರ್ಸೆ ರಘುರಾಮ ಶೆಟ್ಟಿ ಸ್ಮರಣಾರ್ಥ ಕೆ.ಸುಧಾಕರ ಶೆಟ್ಟಿ (ಯು.ಎಸ್.ಎ) ಅವರು ನೀಡಿರುವ ದತ್ತಿನಿಧಿ ಪ್ರಶಸ್ತಿಯಾದ ಜಾನಪದ ಲೋಕ ಪ್ರಶಸ್ತಿಯನ್ನು ತಾಲ್ಲೂಕಿನ ಹರ್ಲಾಪುರ ಗ್ರಾಮದ ದೈಹಿಕ ಶಿಕ್ಷಣ ಶಿಕ್ಷಕ ಮುತ್ತಪ್ಪ ಬಸವಂತಪ್ಪ ದಾಟನಾಳ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಳೆದ 2 ದಶಕಗಳಿಂದ ಮಲ್ಲಕಂಬ ಹಾಗೋ ರೋಪ್ ಮಲ್ಲಕಂಬ ಸೇರಿದಂತೆ ಬೀದಿ ನಾಟಕಗಳನ್ನು ಹವ್ಯಾಸಿ ಕಲಾವಿದನಾಗಿ ನಟಿಸುವ ಮೂಲಕ ಸರ್ಕಾರದ ಜನಪರ ಯೋಜನೆಗಳನ್ನು ತಿಳಿಸುವ ಪ್ರಚಾರ ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.