ಭಾನುವಾರ, ಅಕ್ಟೋಬರ್ 20, 2019
27 °C

69 ರೌಡಿಗಳ ಮನೆ ಮೇಲೆ ದಾಳಿ

Published:
Updated:

ಹುಬ್ಬಳ್ಳಿ: ಅಪರಾಧ ಚಟುವಟಿಕೆ ನಿಯಂತ್ರಣಕ್ಕಾಗಿ ರೌಡಿ ಶೀಟರ್‌ಗಳ ಮನೆ ಮೇಲೆ ದಾಳಿ ಮುಂದುವರಿಸಿರುವ ಅವಳಿನಗರ ಪೊಲೀಸರು, ಮಂಗಳವಾರ ಬೆಳಿಗ್ಗೆ 69 ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ 61 ಹಾಗೂ ಧಾರವಾಡದಲ್ಲಿ 8 ರೌಡಿಗಳ ಮೇಲೆ ದಾಳಿ ನಡೆಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ 35 ರೌಡಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಡಿಸಿಪಿಗಳಾದ ಡಿ.ಎಲ್. ನಾಗೇಶ, ಡಾ. ಶಿವಕುಮಾರ ಗುಣಾರೆ, ಎಸಿಪಿಗಳಾದ ಎಸ್‌.ಎಂ. ಸಂದಿಗವಾಡ ಹಾಗೂ ಎಂ.ಎನ್. ರುದ್ರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ದಂಡ ವಸೂಲಿ:

ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಿರುವ ಅವಳಿನಗರದ ಸಂಚಾರ ಪೊಲಿಸರು 254 ಪ್ರಕರಣ ದಾಖಲಿಸಿ, ₹3.57 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

Post Comments (+)