ಅವಳಿ ನಗರದಲ್ಲಿ ಮಳೆ

7

ಅವಳಿ ನಗರದಲ್ಲಿ ಮಳೆ

Published:
Updated:
ಧಾರವಾಡ ತಪೋವನ ಬಳಿ ಬುಧವಾರ ಬೆಳಿಗ್ಗೆ ಸುರಿಯುತ್ತಿದ್ದ ಸೋನೆ ಮಳೆಯಲ್ಲಿ ಜರ್ಕಿನ್ ತೊಟ್ಟ ಮಕ್ಕಳು ಸೈಕಲ್ ಏರಿ ಹೊರಟ ದೃಶ್ಯ ಕಂಡುಬಂತು

ಹುಬ್ಬಳ್ಳಿ/ಧಾರವಾಡ: ಅವಳಿ ನಗರದಲ್ಲಿ ಬುಧವಾರವೂ ಮುಂದುವರಿದಿದೆ. ಧಾರವಾಡದಲ್ಲಿ ಬೆಳಿಗ್ಗೆಯಿಂದಲೇ ಬಿಟ್ಟು, ಬಿಟ್ಟು ಬಂದರೆ, ಹುಬ್ಬಳ್ಳಿಯಲ್ಲಿ ಬೆಳಿಗ್ಗೆ ಆಗಾಗ ಮಳೆ ಸುರಿಯಿತು.

ಬೆಳಿಗ್ಗೆ ಮಕ್ಕಳು ಮಳೆಯಲ್ಲಿ ನೆನೆಯುತ್ತಲೇ ಶಾಲೆಗೆ ಹೆಜ್ಜೆ ಹಾಕಿದರು. ಇನ್ನು ಕೆಲವರು ರೇನ್‌ ಕೋಟ್‌, ಜರ್ಕೀನ್‌ ತೊಟ್ಟು ಬಸ್ಸು ಹಿಡಿದರು. ಕಚೇರಿಗೆ ತೆರಳುತ್ತಿದ್ದ ನೌಕರರು, ಸಾರ್ವಜನಿಕರು ಮಳೆಯಲ್ಲಿಯೇ ಹೋಗುತ್ತಿದ್ದ ದೃಶ್ಯಗಳು ಧಾರವಾಡದಲ್ಲಿ ಕಂಡು ಬಂದವು.

ಬೆಳಿಗ್ಗೆ ಸ್ವಲ್ಪ ಜೋರಾಗಿಯೇ ಆರಂಭಗೊಂಡ ಮಳೆ ಮಧ್ಯಾಹ್ನದ ನಂತರ ಬಿಡುವು ಕೊಟ್ಟಿತ್ತು. ಗುರುವಾರ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !