ಶನಿವಾರ, ಮೇ 21, 2022
22 °C

ರಾಮನವಮಿ: ಭವ್ಯ ಶೋಭಾ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮನೆಯಲ್ಲಿ ನಮ್ಮ ಮಕ್ಕಳಿಗೆ ಸಾಧಕರ ಹಾಗೂ ಆದರ್ಶಗಳನ್ನು ಬಿತ್ತಿ ಹೋದವರ ಕಥೆಗಳನ್ನು ಹೇಳಿ ಸಾಧನೆಗೆ ಪ್ರೇರಣೆ ತುಂಬಬೇಕು ಎಂದು ಕಾರ್ಕಳದ ಆದರ್ಶ ಗೋಖಲೆ ಹೇಳಿದರು.

ನವನಗರದ ಬಸವಾ ಎಸ್ಟೇಟ್‌ನಲ್ಲಿ ಬ್ರಾಹ್ಮಣ ಸೇವಾಸಂಘ ರಾಮನವಮಿ ಅಂಗವಾಗಿ ಆಯೋಜಿಸಿದ್ದ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ ‘ದೇಶದಲ್ಲಿ ನಿರಂತರವಾಗಿ ಧರ್ಮ ಪ್ರಜ್ಞೆ ಜಾಗೃತವಾಗಬೇಕು. ಮಕ್ಕಳಿಗೆ ಜೀಜಾಬಾಯಿ, ರಾಮ, ಕೃಷ್ಣ ಹಾಗೂ ಶಿವಾಜಿ ಮಹಾರಾಜರ ಕಥೆಗಳನ್ನು ಹೇಳಬೇಕು. ಈ ಮೂಲಕ ಮಕ್ಕಳಲ್ಲಿ ಜೀವನದ ಕೊನೆಯ ತನಕ ಧರ್ಮ ಸಂಸ್ಕೃತಿ ಉಳಿಯುವಂತೆ ನೋಡಿಕೊಳ್ಳಬೇಕು. ಸನಾತನ ಹಿಂದೂ ಧರ್ಮದ ಜಾಗೃತಿ ಮೂಡಿಸಬೇಕು’ ಎಂದರು.

ಶೋಭಾಯಾತ್ರೆಗೆ ಹುಬ್ಬಳ್ಳಿ–ಧಾರವಾಡ ಸಹಾಯಕ ಪೊಲೀಸ್‌ ಆಯುಕ್ತ ವಿನೋದ್ ಮುಕ್ತೇದಾರ ಹಾಗೂ ನವನಗರ ಠಾಣೆ ಪೊಲೀಸ್‌ ಇನ್‌ಸ್ಟೆಕ್ಟರ್‌ ಬಿ.ಎಸ್‌. ಮಂಟೂರ ಚಾಲನೆ ನೀಡಿದರು.

ನವನಗರ ಬ್ರಾಹ್ಮಣ ಸೇವಾ ಸಂಘದ ಯುವಕ ಮಂಡಳದ ಅಧ್ಯಕ್ಷ ಸಚಿನ್ ಪಾಟೀಲ, ಪಾಲಿಕೆ ಸದಸ್ಯೆ ಸುನಿತಾ ಮಾಳವಾದಕರ, ಮಂಜುನಾಥ ಬುರ್ಲಿ, ಬ್ರಾಹ್ಮಣ ಸೇವಾಸಂಘದ ಸತೀಶ ದೀಕ್ಷಿತ, ನರೇಂದ್ರ ಕುಲಕರ್ಣಿ, ರಾಜು ಚವಟೆ, ರಾಜು ಸವಡಿಜೋಶಿ, ಶ್ರೀಹರಿ ಕುಲಕರ್ಣಿ, ರಾಘವೇಂದ್ರ ತೊಣಸಿ, ಶ್ರೀಹರಿ ರಾಜಪುರೋಹಿತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.