ಭಾನುವಾರ, ಮೇ 22, 2022
27 °C

360 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಣ್ಣಿಗೇರಿ: ಪಟ್ಟಣದ ಹುಡ್ಕೋ ಕಾಲೊನಿ ಹತ್ತಿರದ ನಿಂಗಪ್ಪ ದೇಸಾಯಿ ಎಂಬುವರಿಗೆ ಸೇರಿದ್ದ ಹಳೇ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ, ಪಡಿತರ ಅಕ್ಕಿಯನ್ನು ಖಚಿತ ಮಾಹಿತಿ ಮೇರೆಗೆ ಉಪವಿಭಾಗಾಧಿಕಾರಿ ಡಾ.ಮಾಧವ ಗಿತ್ತೆ ಸೋಮವಾರ ತಡರಾತ್ರಿ ದಾಳಿ ಮಾಡಿ ವಶಕ್ಕೆ ಪಡೆದುಕೊಂಡರು.

500ಕ್ಕೂ ಹೆಚ್ಚು ಅಕ್ಕಿ ತುಂಬಿದ ಚೀಲಗಳನ್ನು ಎರಡು ವಾಹನದಲ್ಲಿ ತುಂಬಿ ನಿಲ್ಲಿಸಲಾಗಿತ್ತು. ಅಕ್ರಮ ಸಾಗಾಟಕ್ಕೆ ಬಳಸುತ್ತಿದ್ದ ಒಂದು ಲಾರಿ ಹಾಗೂ ಒಂದು ಬೊಲೆರೊ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಉಪವಿಭಾಗಾಧಿಕಾರಿ ಡಾ.ಮಾಧವ ಗಿತ್ತೆ, ತಹಶೀಲ್ದಾರ್‌ ಮಂಜುನಾಥ ಅಮಾಸಿ, ತಾಲ್ಲೂಕು ಆಹಾರ ನಿರೀಕ್ಷಕ ಟಿ.ಎಲ್.ಮುತ್ತಣ್ಣವರ ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ವಶಪಡಿಸಿಕೊಂಡ 360 ಕ್ವಿಂಟಾಲ್‌ ಅಕ್ಕಿಯನ್ನು ಜಿಲ್ಲಾ ಆಹಾರ ಉಗ್ರಾಣ ನಿಗಮಕ್ಕೆ ಸಾಗಿಸಲಾಯಿತು. ಇದಕ್ಕೆ ಬಳಸಲಾದ ವಾಹನಗಳನ್ನು ಸ್ಥಳೀಯ ಪೊಲೀಸ್ ವಶಕ್ಕೆ ನೀಡಿ ಪ್ರಕರಣ ದಾಖಲಿಸಲಾಯಿತು. ತನಿಖೆ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಗಿತ್ತೆ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.