ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಿದ್ಧ ಉಡುಪು ಮಾರಾಟ, ಪ್ರದರ್ಶನ

Last Updated 26 ಮಾರ್ಚ್ 2023, 16:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಉಣಕಲ್ ಸಮೀಪದ ನವೀನ ಹೋಟೆಲ್‌ನಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ಬ್ರಾಂಡೆಡ್ ಸಿದ್ಧ ಉಡುಪು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ.

ಮಹಿಳೆಯರ, ಪುರುಷರ, ಮಕ್ಕಳ ಸಿದ್ಧ ಉಡುಪುಗಳನ್ನು ಭಾರಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ಯಾಂಟ್, ಟೀ-ಶರ್ಟ್, ಲೋವರ್ ಟಾಪ್, ಬರ್ಮುಡಾ, ಕೇಪ್ರಿ, ಪ್ಲಾಜೋಗಳು ₹ 150–₹350ಕ್ಕೆ ಲಭ್ಯವಿದೆ. ಹೆಸರಾಂತ ಕಂಪನಿಗಳಾದ ಇಂಡಿಯನ್ ಟೆರೆನ್, ಇಂಡಿಗೋ ನೇಷನ್, ಡ್ಯಾನಿಯಲ್ ಹೆಕ್ಟರ್, ಬಪೆಲೋ, ಇಜೊಡ್, ಸೆಲ್ಯೂಲರ್‌ಗಳ ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಫಾರ್ಮಲ್ ಅಂಗಿಗಳು, ಟೀ-ಶರ್ಟ್‌ಗಳು, ಲೋವರ್‌ಗಳು ಕೇವಲ ₹499–₹999ಕ್ಕೆ ಲಭ್ಯವಿದೆ.

ಬಿಬಾ, ಜ್ಯಾಕ್-ಜೋನ್ಸ್, ವೆರೊಮೋಡಾ, ಎಬಾಪ್ ಕಂಪನಿಗಳ ಹೆಣ್ಣುಮಕ್ಕಳ ಕುರ್ತಿ ಮತ್ತು ಪಾಶ್ಚಿಮಾತ್ಯ ಬಟ್ಟೆಗಳು ₹200, ₹400, ₹600ಕ್ಕೆ ಇಲ್ಲಿ ಸಿಗುತ್ತವೆ. ರಾಜಸ್ಥಾನ ರಾಯಲ್ ಪ್ರಿಂಟೆಡ್ ಆಕರ್ಷಕ ಬೆಡ್‌ಶೀಟ್, ತಲೆದಿಂಬು ಕವರ್, ಸೋಫಾ ಕವರ್ ಕೈಗೆಟುಕುವ ದರದಲ್ಲಿ ದೊರೆಯುತ್ತವೆ. ಪುರುಷ ಮತ್ತು ಮಹಿಳೆಯರ ಒಳ ಉಡುಪುಗಳು ₹60–₹125ಕ್ಕೆ ಲಭ್ಯವಿವೆ. ಈ ಮಾರಾಟ ಕೆಲವೇ ದಿನ ಮಾತ್ರ‌ವಿದೆ ಎಂದು ವ್ಯವಸ್ಥಾಪಕ ಗಜೇಂದ್ರ ಜಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT