ವೃದ್ಧೆಯ ಮನೆ ನೆಲಸಮ ಮಾಡಿದ ರೌಡಿಶೀಟರ್‌

7

ವೃದ್ಧೆಯ ಮನೆ ನೆಲಸಮ ಮಾಡಿದ ರೌಡಿಶೀಟರ್‌

Published:
Updated:

ಧಾರವಾಡ: ಆಸ್ತಿ ವಿಷಯವಾಗಿ ವೃದ್ಧೆಯೊಬ್ಬರಿಗೆ ಸೇರಿದ ಮನೆಯನ್ನು ರೌಡಿಶೀಟರ್ ಒಬ್ಬ ಮಂಗಳವಾರ ನೆಲಸಮ ಮಾಡಿದ ಪ್ರಕರಣ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಕೆಲಗೇರಿ ಬಡಾವಣೆಯಲ್ಲಿ ವಾಸಿಸುತ್ತಿದ್ದ ಕಲ್ಲಮ್ಮ ಪೂಜಾರ ಅವರ ಒಂದು ಗುಂಟೆ ಜಾಗದಲ್ಲಿದ್ದ ಮನೆಗೆ ಹೊಂದಿಕೊಂಡಂತಿದ್ದ ಜಾಗವನ್ನು ರೌಡಿ ಶೀಟರ್ ಲಾಜರಸ್ ಎಂಬಾತನಿಗೆ ಮಾರಾಟ ಮಾಡಿದ್ದರು. ಜಾಗ ಮತ್ತು ಅಜ್ಜಿ ವಾಸಿಸುತ್ತಿದ್ದ ಮನೆ ಎರಡೂ ನನ್ನದೆ ಎಂದು ಪಟ್ಟುಹಿಡಿದ ಲಾಜರಸ್‌, ವೃದ್ಧಗೆ ಬೆದರಿಕೆ ಹಾಕಿದ್ದಾನೆ. ಮನೆ ಖಾಲಿ ಮಾಡುವಂತೆ ಎಚ್ಚರಿಕೆಯನ್ನೂ ನೀಡಿದ್ದ. ಆದರೆ ಇದನ್ನು ನಿರಾಕರಿಸಿದ್ದರಿಂದ ಮನೆ ನೆಲಸಮ ಮಾಡಿದ್ದಾನೆ ಎಂದು ಕಲ್ಲವ್ವ ಆರೋಪ ಮಾಡಿದ್ದಾರೆ.

‘ಮಂಗಳವಾರ ಬೆಳಿಗ್ಗೆ ತನ್ನ ಬೆಂಬಲಿಗರೊಂದಿಗೆ ಬಂದ ಲಾಜರಸ್‌, ಜೆಸಿಬಿ ಬಳಸಿ ಮನೆಯನ್ನು ನೆಲಸಮ ಮಾಡಿದ್ದಾನೆ. ಇದನ್ನು ತಡೆಯಲು ಹೋದ ನನ್ನ ಮೇಲೂ ಹಲ್ಲೆ ಮಾಡಿದ್ದಾನೆ. ನನ್ನನ್ನು ಕಟ್ಟಿ ಬಾವಿಗೆ ಇಳಿಬಿಟ್ಟಿದ್ದ’ ಎಂದು ಕಲ್ಲವ್ವ ತನ್ನ ಗೋಳು ತೋಡಿಕೊಂಡರು.

ನೆಲಸಮವಾದ ಮನೆ ಎದುರು ಕಲ್ಲವ್ವನ ಮೂಖರೋಧನ ಕರಳು ಕಿವುಚುವಂತಿತ್ತು. ಈ ಕುರಿತಂತೆ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !