ಇದೇ 12ರಂದು ಶಿಳ್ಳೆಕ್ಯಾತ ಸಮುದಾಯದ ರಾಜ್ಯ ಸಮಾವೇಶ

7

ಇದೇ 12ರಂದು ಶಿಳ್ಳೆಕ್ಯಾತ ಸಮುದಾಯದ ರಾಜ್ಯ ಸಮಾವೇಶ

Published:
Updated:

ಹುಬ್ಬಳ್ಳಿ: ಶಿಳ್ಳೆಕ್ಯಾತ ಸಮುದಾಯದ ರಾಜ್ಯ ಸಮಾವೇಶ ಇಲ್ಲಿನ ಉಣಕಲ್ಲದ ಸಾಯಿನಗರ ರಸ್ತೆಯಲ್ಲಿರುವ ಸದ್ಗುರು ಶ್ರೀ ಸಿದ್ಧೇಶ್ವರ ಮೂಲ ಗದ್ದುಗೆಯ ಮಠದ ಅನುಭವನ ಮಂಟಪದಲ್ಲಿ ಇದೇ 12ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿದೆ.

ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಶಿಳ್ಳೆಕ್ಯಾತರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಅಶೋಕ್ ಎಸ್ ವಾಲ್ಮೀಕಿ, ವೀರಭದ್ರ ಲೀಲಾಮಠದ ಕಲ್ಲಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಜಗದೀಶ ಶೆಟ್ಟರ್ ಉದ್ಘಾಟಿಸುವರು. ಶಿಳ್ಳೆಕ್ಯಾತರಿಗೆ ಕಿಳ್ಳೇಕ್ಯಾತರ, ಜಾಲಗಾರ, ಕಟಬು, ಕಟಬರ, ಬುಂಡೆಬೆಸ್ತರು ಎಂಬ ಪರ್ಯಾಯ ಪದಗಳಿಂದಲೂ ಕರೆಯಲಾಗುತ್ತದೆ. ಈ ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗವಹಿಸಬೇಕು ಎಂದರು.

ಸಮಾಜದ ಪ್ರಗತಿ ಹಾಗೂ ಗುರುಪೀಠದ ಸ್ಥಾಪನೆ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು. ಜಾಲಗಾರ ಸಮಾಜದ ಅಧ್ಯಕ್ಷ ಈಶ್ವರ ರಾಮಕೃಷ್ಣ ಕಟ್ಟಿಮನಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !