ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದೇಶ್ವರ ಶ್ರೀಗಳಿಂದ ಪ್ರವಚನ ಮಾ.1ರಿಂದ

Last Updated 24 ಫೆಬ್ರುವರಿ 2020, 11:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳಿಂದ ಮಾರ್ಚ್‌ 1ರಿಂದ 31ರ ವರೆಗೆ ಗೋಕುಲದಲ್ಲಿ ‘ಆಧ್ಯಾತ್ಮಿಕ ಪ್ರವಚನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮೀಜಿ ತಿಳಿಸಿದರು.

ಗೋಕುಲದ ರೇವಡಿಹಾಳ ರಸ್ತೆಯಲ್ಲಿರುವ ಬಸವಂತಪ್ಪ ಹೊಸಮನಿ ಅವರ ಹೊಲದಲ್ಲಿ ಪ್ರತಿ ದಿನ ಬೆಳಿಗ್ಗೆ 6.30ರಿಂದ 7.30ರ ವರಗೆ ಒಂದು ತಿಂಗಳ ಕಾಲ ಸಿದ್ದೇಶ್ವರ ಶ್ರೀಗಳು ಪ್ರವಚನ ನೀಡಲಿದ್ದಾರೆ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮಾ.1ರಂದು ಬೆಳಿಗ್ಗೆ 6.30ಕ್ಕೆ ಪ್ರವಚನ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ವಿವಿಧ ಮಠಾಧೀಶರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ತಾರಿಹಾಳದ ಶಿವಣ್ಣ ಮುದ್ದಿ ಅವರ ತೋಟದ ಮನೆಯಲ್ಲಿ ತಂಗಲ್ಲಿರುವ ಶ್ರೀಗಳು ಅಲ್ಲಿ ಪ್ರತಿ ಭಾನುವಾರ ಸಂಜೆ 5ರಿಂದ 6ರ ವರೆಗೆ ಇಂಗ್ಲಿಷ್‌ನಲ್ಲಿ ಪ್ರವಚನ ನೀಡಲಿದ್ದು, ಭಕ್ತರು ಅಲ್ಲಿಯೂ ಶ್ರೀಗಳೊಂದಿಗೆ ಸಂವಾದ, ಚರ್ಚೆಯಲ್ಲಿ ಭಾಗವಹಿಸಬಹುದು ಎಂದರು.

ಹುಬ್ಬಳ್ಳಿ, ಧಾರವಾಡ ಹಾಗೂ ಸುತ್ತಮುತ್ತಲಿನಿಂದ ಪ್ರವಚನ ಆಲಿಸಲು ಬರುವವರ ಅನುಕೂಲಕ್ಕಾಗಿ ವಾಯವ್ಯ ಸಾರಿಗೆ ಸಂಸ್ಥೆಯು ಬಸ್‌ ಸೌಲಭ್ಯ ಕಲ್ಪಿಸಲಿದೆ. ಪ್ರವಚನ ನಡೆಯುವ ಮೈದಾನದ ಸಮೀಪ ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಮಹಾನಗರ ಪಾಲಿಕೆಯಿಂದ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಬೆಳಿಗ್ಗೆ 8ರಿಂದ ರಾತ್ರಿ 10ರ ವರೆಗೆ ಪ್ರಸಾದ, ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯ ಪ್ರಮುಖರಾದ ಶಂಕ್ರಣ್ಣ ಮುನವಳ್ಳಿ, ಅಶೋಕ ಪಾಟೀಲ, ವಿಜಯಾನಂದ ಹೊಸಕೋಟಿ, ಮಹೇಶ್‌ ದ್ಯಾವಪ್ಪನವರ, ಜಿ.ವಿ.ವಳಸಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT