ಗುರುವಾರ , ಅಕ್ಟೋಬರ್ 24, 2019
21 °C
ಹೊಸಮಠ: ದಸರಾ ಮಹೋತ್ಸವದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ

ಮಠಗಳಿಂದ ಸಮಾಜ ಸುಧಾರಣೆ

Published:
Updated:
Prajavani

ಹುಬ್ಬಳ್ಳಿ: ‘ಮಠಗಳು ಸಮಾಜದ ಅಂಧಕಾರ ತೊಡೆದು ಜ್ಞಾನದ ಬೆಳಕು ನೀಡಿ, ಸರಿಯಾದ ದಿಕ್ಕಿನಲ್ಲಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.

ನಗರದ ಅಕ್ಕಿಹೊಂಡದಲ್ಲಿರುವ ಹೊಸಮಠದಲ್ಲಿ ಜಗದ್ಗುರು ಬೃಹನ್ ಹೊಸಮಠ ದಸರಾ ಮಹೋತ್ಸವ ಸಮಿತಿ ಆಯೋಜಿಸಿರುವ ‘ಹುಬ್ಬಳ್ಳಿ ದಸರಾ ಮಹೋತ್ಸವ- 2019’ರಲ್ಲಿ ಮಾತನಾಡಿದ ಅವರು, ‘ಸರ್ಕಾರಗಳೂ ಮಾಡಲಾಗದಂತಹ ಮಹಾನ್ ಕಾರ್ಯಗಳನ್ನು ನಾಡಿನ ಅನೇಕ ಮಠಗಳು ಮಾಡಿವೆ’ ಎಂದರು.

‘ಸಾಧು-ಸಂತರು ಹಾಗೂ ಧರ್ಮ ಗುರುಗಳ ಮಾರ್ಗದರ್ಶದಲ್ಲಿ ಈ ದೇಶವನ್ನು ಕಟ್ಟಲಾಗಿದೆ. ಮಠಗಳ ಧಾರ್ಮಿಕ ಪರಂಪರೆ ಹಾಗೂ ಸಂಸ್ಕತಿಯನ್ನು ನಾವೆಲ್ಲರೂ ಉಳಿಸಿ ಬೆಳೆಸಬೇಕಿದೆ. ಮೈಸೂರು ದಸರಾ ಉತ್ಸವದಲ್ಲಿ ಭಾಗವಹಿಸಲಾಗದ ಉತ್ತರ ಕರ್ನಾಟಕ ಭಾಗದ ಅನೇಕ ಕಲಾವಿದರಿಗೆ ಅವಳಿನಗರದ ವಿವಿಧ ದಸರಾ ಉತ್ಸವ ಸಮಿತಿಗಳು 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕಲಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಒದಗಿಸುತ್ತಿವೆ’ ಎಂದು ಹೇಳಿದರು.

ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ನವಲಗುಂದ ಗವಿಮಠದ ಅಭಿನವ ಬಸವಲಿಂಗ ಸ್ವಾಮೀಜಿ, ಉತ್ತರ ಕರ್ನಾಟಕ ಹುಬ್ಬಳ್ಳಿ ದಸರಾ ಸಮಿತಿ ಅಧ್ಯಕ್ಷ ಗಂಗಾಧರ ದೊಡವಾಡ, ಬಿ.ಡಿ. ಹಿರೇಗೌಡರು, ಕಾಳುಸಿಂಗ್ ಚವ್ಹಾಣ, ಚಂದ್ರು ಚರಂತಿಮಠ, ಕಠಾರೆ ಕವಿ, ಮನೋಹರ ಸಾಲಿಮಠ, ಬಸವರಾಜ ಬಗಲಿ ಹಾಗೂ ಶಿವು ಬೆಂಡಿಗೇರಿ ಇದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)