ಮಂಗಳವಾರ, ಅಕ್ಟೋಬರ್ 22, 2019
22 °C
ಜಮ್ಮು–ಕಾಶ್ಮೀರ

ಗುಂಡಿನ ದಾಳಿ: ಯೋಧ ಮಂಜಪ್ಪ ಓಲೇಕಾರ್ ಹುತಾತ್ಮ

Published:
Updated:

ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದ ಯೋಧ ಮಂಜಪ್ಪ ಹನುಮಂತಪ್ಪ ವಾಲೀಕಾರ (29), ಜಮ್ಮು– ಕಾಶ್ಮೀರ ಗಡಿಯಲ್ಲಿ ಉಗ್ರರ ಜೊತೆಗೆ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಮಂಜಪ್ಪ ನಿಧನರಾಗಿರುವ ವಿಷಯವನ್ನು ಮದ್ರಾಸ್‌ ರೆಜಿಮೆಂಟ್‌ನ ಅಧಿಕಾರಿಗಳು ಕುಟುಂಬ ವರ್ಗದವರಿಗೆ ತಿಳಿಸಿದ್ದಾರೆ. 9 ವರ್ಷಗಳಿಂದ ಸೇನೆಯಲ್ಲಿದ್ದ ಅವರು ಆರು ತಿಂಗಳ ಹಿಂದೆ ಮದುವೆಯಾಗಿದ್ದರು. ಅವರ ಪತ್ನಿ ಗರ್ಭಿಣಿಯಾಗಿದ್ದಾರೆ.

‘ಸೇನಾ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ವೀರಯೋಧನ ಪಾರ್ಥಿವ ಶರೀರ ಯಾವಾಗ ಬರಲಿದೆ ಎಂಬುದು ಬುಧವಾರ ಗೊತ್ತಾಗಲಿದೆ’ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)