ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಬಾಸ್ಕೆಟ್‌ ಬಾಲ್‌: ಮೈಸೂರು ಮಹಿಳಾ ತಂಡಕ್ಕೆ ಪ್ರಶಸ್ತಿ

ರಾಜ್ಯಮಟ್ಟದ ಬಾಸ್ಕೆಟ್‌ ಬಾಲ್‌ ನಿಟ್ಟೆ ಕೆ.ಎಸ್‌.ಹೆಗಡೆ ತಂಡ ರನ್ನರ್‌ ಅಪ್‌
Published 11 ಫೆಬ್ರುವರಿ 2024, 18:33 IST
Last Updated 11 ಫೆಬ್ರುವರಿ 2024, 18:33 IST
ಅಕ್ಷರ ಗಾತ್ರ

ಧಾರವಾಡ: ಮೈಸೂರಿನ ರಾಜ್ಯ ಕ್ರೀಡಾ ಇಲಾಖೆಯ ವಸತಿ ನಿಲಯದ ಮಹಿಳಾ ತಂಡವು ರಾಜ್ಯ ಮತ್ತು ಜಿಲ್ಲಾ ಬ್ಯಾಸ್ಕೆಟ್‌ ಬಾಲ್‌ ಸಂಸ್ಥೆ ಸಹಯೋಗದಲ್ಲಿ ರೋವರ್ಸ್‌ ಕ್ಲಬ್‌ ಆಯೋಜಿಸಿದ ರಾಜ್ಯಮಟ್ಟದ ಹೊನಲು ಬೆಳಕಿನ ಬಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್ ಆಯಿತು.

ನಗರದ ರೋವರ್ಸ್‌ ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿ ನಡೆದ ಸೆಮಿಫೈನಲ್‌ ಲೀಗ್‌ ಹಂತದ ಮೂರು ಪಂದ್ಯಗಳನ್ನು ಗೆದ್ದ ಮೈಸೂರು ವನಿತೆಯರು ಈ ಸಾಧನೆ ಮಾಡಿದರು. ನಿಟ್ಟೆಯ ಕೆ.ಎಸ್‌.ಹೆಗಡೆ ತಂಡದವರು ಎರಡು ಪಂದ್ಯಗಳಲ್ಲಿ ಜಯಗಳಿಸಿ ರನ್ನರ್‌ ಅಪ್‌ ಸ್ಥಾನ ಪಡೆದರು.

ಭಾನುವಾರ ನಡೆದ ಸೆಮಿ ಫೈನಲ್‌ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಮೈಸೂರಿನ ಕ್ರೀಡಾ ಹಾಸ್ಟೆಲ್‌ (ಡಿವೈಇಎಸ್‌) ತಂಡವು 60–53 ಅಂಕಗಳಿಂದ ಬೆಂಗಳೂರಿನ ಬೀಗಲ್ಸ್‌ ತಂಡವನ್ನು ಸೋಲಿಸಿತು. ಕ್ರೀಡಾ ಹಾಸ್ಟೆಲ್‌ ತಂಡದ ಐಶ್ವರ್ಯಾ (19) ಹಾಗೂ ಬೀಗಲ್ಸ್‌ ತಂಡದ ಚಂದನಾ (22) ಚಾಕಚಕ್ಯತೆಯ ಆಟ ಆಡಿದರು.

ಸೆಮಿಫೈನಲ್‌ ಲೀಗ್‌ ಹಂತದ ಐದನೇ ಪಂದ್ಯದಲ್ಲಿ ನಿಟ್ಟೆಯ ಕೆ.ಎಸ್‌.ಹೆಗ್ಡೆ ತಂಡವು 66–35ರಿಂದ ಧಾರವಾಡದ ರೋವರ್ಸ್‌ ತಂಡದ ವಿರುದ್ಧ ಜಯಿಸಿತು. ಕೆ.ಎಸ್‌.ಹೆಗ್ಡೆ ತಂಡದ ದಿವ್ಯಾ (20) ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT