ಅತ್ಯಾಚಾರಕ್ಕೆ ಯತ್ನ: 4 ವರ್ಷ ಕಠಿಣ ಶಿಕ್ಷೆ, ದಂಡ

7

ಅತ್ಯಾಚಾರಕ್ಕೆ ಯತ್ನ: 4 ವರ್ಷ ಕಠಿಣ ಶಿಕ್ಷೆ, ದಂಡ

Published:
Updated:

ಧಾರವಾಡ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕುಂದಗೋಳ ತಾಲ್ಲೂಕಿನ ಹೊಸಕೋಟೆ ಗ್ರಾಮದ ಅರುಣಗೌಡ ಪಾಟೀಲ ಎಂಬಾತನಿಗೆ ಇಲ್ಲಿನ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ನಾಲ್ಕು ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

2017 ರ ಫೆಬ್ರುವರಿ 11 ರಂದು ಹೊಸಕೋಟೆ ಗ್ರಾಮದ ಅರುಣಗೌಡ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಕುಂದಗೋಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಾವಿತ್ರಿ ಕುಜ್ಜಿ, ‘ಆರೋಪಿಗೆ 4 ವರ್ಷ ಕಠಿಣ ಶಿಕ್ಷೆ, ₹ 5,000 ದಂಡ ವಿಧಿಸಿದ್ದಾರೆ. ದಂಡದ ಪೈಕಿ ₹3,000 ಸಂತ್ರಸ್ತ ಬಾಲಕಿಗೆ ನೀಡುವಂತೆ ಸೂಚಿಸಿದ್ದಾರೆ.

ಸರ್ಕಾರದ ಪರ ಎಸ್‌.ಎಸ್.ದೊಡ್ಡಲಿಂಗಣ್ಣವರ ವಾದ ಮಂಡಿಸಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !