ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ 100 ಪ್ರಕರಣ ದಾಖಲು ಇಂದು!

Last Updated 6 ಜನವರಿ 2014, 5:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭೂಮಿಯ ಹಕ್ಕಿಗಾಗಿ ನೂರು ರೈತರು ‘ವ್ಯತಿರಿಕ್ತ ಸ್ವಾಧೀನ’ (ಅಡ್ವರ್ಸ ಪೊಸೆಷನ್‌) ಹಕ್ಕು ಅಡಿ ಪ್ರಕ­ರಣ ದಾಖಲಿಸಲು ಇದೇ 6ರಂದು ಏಕ­ಕಾಲಕ್ಕೆ ಕಲಘಟಗಿ ಜೆಎಂಎಫ್‌ ಮತ್ತು ಸಿವಿಲ್‌ (ದಿವಾನ) ನ್ಯಾಯಾ­ಲಯದ ಮೆಟ್ಟಿಲೇರುವ ಮೂಲಕ ಹೊಸ ದಾಖಲೆಗೆ ಸಾಕ್ಷಿಯಾಗಲಿ­ದ್ದಾರೆ!

ನ್ಯಾಯಾಲಯದಲ್ಲಿ ರೈತರು  ಪ್ರತ್ಯೇಕ­ವಾಗಿ ಸಿವಿಲ್‌  ಪ್ರಕರಣ ದಾಖ­ಲಿಸಿ­ಕೊಳ್ಳಲು ಧಾರವಾಡ ವಕೀಲರ ಸಂಘದ ಮಾಜಿ ಅಧ್ಯಕ್ಷ, ರಾಮನಗರ ನಿವಾಸಿ ರಾಜಶೇಖರ ಐ. ಸವದತ್ತಿ ನೆರ­ವಾಗಲಿದ್ದಾರೆ. ಈ ಕುರಿತು ‘ಪ್ರಜಾ­ವಾಣಿ’ಗೆ ಮಾಹಿತಿ ನೀಡಿದ ಅವರು, ಒಂದೇ ಬಾರಿಗೆ ನೂರು ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿ­ಯಾಗಲಿದೆ. ಚಿಕ್ಕ­ಬಳ್ಳಾಪುರ ನ್ಯಾಯಾ­ಲಯದಲ್ಲಿ 19­92­ರಲ್ಲಿ ಏಕಕಾಲಕ್ಕೆ 92 ಪ್ರಕರಣ ದಾಖ­ಲಾಗಿರುವುದು ಈವ­ರೆಗಿನ ದಾಖಲೆ’ ಎಂದರು.

‘ಇದೇ 6ರಂದು ಮುಂಜಾನೆ 10.30ಕ್ಕೆ ಗಳಗಿ ಹುಲಕೊಪ್ಪ, ಆರ್‌.ಪಿ. ಬಸನಕೊಪ್ಪ, ಸಿ.ಜಿ. ಗತ್ತಿ, ಹಸರಂಬಿ ಮತ್ತಿತರ ಹಳ್ಳಿಗಳ 199 ಕುಟುಂಬಗಳು ನ್ಯಾಯಾಲಯದ ಆವರಣಕ್ಕೆ ಬರಲಿದ್ದಾರೆ’ ಎಂದರು.

‘ಹನ್ನೆರಡು ವರ್ಷಗಳಿಂದ ನೆಲೆಸಿ­ದ್ದರೂ ಭೂಮಿ ಸ್ವಂತವಾಗದ ಈ ಕುಟುಂ­ಬ­ಗಳ ಪರವಾಗಿ ಭೂ ಒಡೆತನದ ಹಕ್ಕು ಪಡೆದುಕೊಳ್ಳಲು ‘ಅಡ್ವರ್ಸ ಪೊಸೆ­ಷನ್‌’ ಹಕ್ಕು ಅಡಿ 100 ಪ್ರಕರಣಗಳನ್ನು ನ್ಯಾಯಾಧಿೀಶರ ಮುಂದೆ ದಾಖಲು ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT