ಧಾರವಾಡ: ಕಂಚಿನ ಕಂಠದ ಗಾಯಕ, ಗ್ವಾಲಿಯರ್ ಹಾಗೂ ಕಿರಾಣಾ ಘರಾಣಾದ ಸಮ್ಮಿಲನ, ವೈವಿಧ್ಯಮಯ ತಾನ್ಗಳ ಪ್ರಸ್ತುತಪಡಿಸುವ ಹಿರಿಯ ಗಾಯಕ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಂಡಿತ ಎಂ.ವೆಂಕಟೇಶಕುಮಾರ್ ಅವರಿಗೆ ಇಲ್ಲಿ ಅಭಿನಂದಿಸಲಾಯಿತು.

ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ಮತ್ತು ಭಾರತೀಯ ಸಂಗೀತ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ವೆಂಕಟೇಶಕುಮಾರ್ ಅವರನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ ಕಾರ್ನಾಡ ಸನ್ಮಾನಿಸಿದರು.

ಉತ್ತರ ಕರ್ನಾಟಕದ ಜನ ಗಾನ ಸುಧೆಯಿಂದ ಬೆಳೆದವರಾಗಿದ್ದಾರೆ. ಪ್ರಖ್ಯಾತ ಕಲಾವಿದ ಹಾಗೂ ಸಂಗೀತ ಗಾರರನ್ನು ನಾಡಿಗೆ, ರಾಷ್ಟ್ರಕ್ಕೆ ನೀಡಿದ ಕೀರ್ತಿ ಧಾರವಾಡದ್ದಾಗಿದೆ ಎಂದು ಡಾ. ಗಿರೀಶ ಕಾರ್ನಾಡ ಅವರು ಹೇಳಿದರು.

ಜಿಲ್ಲಾಧಿಕಾರಿ ದರ್ಪಣ ಜೈನ್ ಅಧ್ಯಕ್ಷತೆ ವಹಿಸಿದ್ದರು. ಹಮೀದ್ಖಾನ್ ವೇದಿಕೆಯಲ್ಲಿದ್ದರು. ಡಾ. ರಮಾಕಾಂತ ಜೋಶಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಶಿಧರ ನರೇಂದ್ರ ನಿರೂಪಿಸಿದರು. ಡಾ. ಹ.ವೆಂ.ಕಾಖಂಡಕಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.