ಹುಬ್ಬಳ್ಳಿ: ನಗರದ ವೀರಾಪುರ ಓಣಿಯ ಬಸವ ಮಂಟಪದಲ್ಲಿ ಅಪರೂಪದ ಕಾರ್ಯಕ್ರಮ ಗುರುವಾರ ನಡೆಯಿತು.
ಎರಡೆತ್ತಿನಮಠದ ಸಿದ್ಧಲಿಂಗೇಶ್ವರ ಸ್ವಾಮೀಜಿ ಅವರು 60ನೇ ವರ್ಷಕ್ಕೆ ಕಾಲಿಟ್ಟ ಪ್ರಯುಕ್ತ ಭಕ್ತರು ತುಲಾಭಾರ ಮಾಡುವ ಗುರು ವಂದನೆ ಸಲ್ಲಿಸಿದರು. ಗಂಗಮ್ಮಾ ಕಂಠಿ ಹಾಗೂ ಕುಟುಂಬದವರು ರುದ್ರಾಕ್ಷಿ, ಕಿರಣ್ ವಿಭೂತಿಮಠರು ವಿಭೂತಿ, ಬಸವಣ್ಣೆಪ್ಪ ಸಾವತೆಯವರು ಅಕ್ಕಿ, ಪ್ರಕಾಶ ಕಡೂರು ಉತ್ತತ್ತಿ, ಶಾಂತವ್ವ ಭಂಡಿವಾಡ ನಾಣ್ಯ, ಜಿ.ಜಿ. ಪೂಜಾರಿ ಕಲ್ಲಸಕ್ಕರೆ, ಮಂಜುನಾಥ ಜವಳಿ ಸಕ್ಕರೆ, ಶಾಂತಣ್ಣಾ ನೀಲೂಗಲ್ಲ ತೆಂಗಿನಕಾಯಿ ಹಾಗೂ ಬಸವರಾಜ ಮಮದಾಪುರ ಬಾಳೆಹಣ್ಣು ಮೂಲಕ ಸ್ವಾಮೀಜಿ ಅವರನ್ನು ತುಲಾಭಾರ ಮಾಡಿದರು. ನಂತರ 60 ವರ್ಷ ತುಂಬಿದ 60 ಜನರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಯವರು ಸಿದ್ಧಲಿಂಗೇಶ್ವರ ಸ್ವಾಮೀಜಿ ಅವರಿಗೆ ರೇಶ್ಮೆ ಶಾಲು ಹೊದಿಸಿ, ಯಾಲಕ್ಕಿ ಹಾರ ಮೂಲಕ ಸತ್ಕರಿಸಿದರು.

`ಪವಿತ್ರವಾದ ಸಮಾರಂಭವಿದು. ಮಕ್ಕಳ ಜನ್ಮದಿನ ಮಾಡಿದರೆ ಕುಟುಂಬಕ್ಕೆ ಸೀಮಿತವಾಗುತ್ತದೆ. ಆದರೆ ಸ್ವಾಮೀಜಿಯವರ ಜನ್ಮದಿನ ಸಾಮಾಜಿಕವಾದುದು. ಪ್ರವಚನ ಮೂಲಕ ಭಕ್ತಾದಿಗಳನ್ನು ಜಾಗೃತಿಗೊಳಿ ಸುತ್ತಿರುವ ಸಿದ್ಧಲಿಂಗೇಶ್ವರ ಸ್ವಾಮೀಜಿ ವ್ಯಕ್ತಿಯಲ್ಲ, ಶಕ್ತಿಯಾಗಿದ್ದಾರೆ~ ಎಂದು ಮೂರುಸಾವಿರಮಠದ ಶ್ರೀಗಳು ಶ್ಲಾಘಿಸಿದರು. ಮಂಟೂರು ಶಿವಲಿಂಗೇಶ್ವರ ಸ್ವಾಮೀಜಿ, ಬೊಮ್ಮನಹಳ್ಳಿಯ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಕೂಡಲ ನಂಜೇಶ್ವರ ಸ್ವಾಮೀಜಿ ವೇದಿಕೆ ಮೇಲಿದ್ದರು.

ಪ್ರಭು ನವಲಗುಂದಮಠ ಸ್ವಾಗತಿಸಿದರು. ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಣಾ ಪಾವಟೆ ವಂದಿಸಿದರು. ಸಂಗಮೇಶ ಪಟ್ಟಣಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ಕಾರ್ಯಕ್ರಮದ ನಂತರ ವೀರಾಪುರ ಓಣಿಯ ಅನಾಥ ಮಕ್ಕಳಿಗೆ ಹಣ್ಣು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.