ಗೌರಿ ಹಬ್ಬ; ಸೇವಂತಿಗೆ, ಕನಕಾಂಬರ ತುಟ್ಟಿ

7
ಹಣ್ಣುಗಳ ಬೆಲೆಯಲ್ಲಿ ಕೊಂಚ ಏರಿಕೆ; ತರಕಾರಿ, ಸೊಪ್ಪಿನ ದರ ಸ್ಥಿರ

ಗೌರಿ ಹಬ್ಬ; ಸೇವಂತಿಗೆ, ಕನಕಾಂಬರ ತುಟ್ಟಿ

Published:
Updated:
Deccan Herald

ರಾಮನಗರ: ಗೌರಿ–ಹಣೇಶ ಹಬ್ಬಕ್ಕೆ ಹೂವು–ಹಣ್ಣಿನ ಜೊತೆಗೆ ತರಕಾರಿಯೂ ಕೊಂಚ ತುಟ್ಟಿಯಾಗಿದೆ. ಅದರಲ್ಲೂ ಬುಧವಾರ ಮಾರುಕಟ್ಟೆಯಲ್ಲಿ ಹೂವು ಮಾರಿಗೆ ₹ 100ರ ದರದಲ್ಲಿ ಮಾರಾಟವಾಗಿ ಗ್ರಾಹಕರ ಜೇಬು ಖಾಲಿಯಾಗಿಸಿತು.

ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಬೆಳಗ್ಗೆ ಜನರಿಂದ ಗಿಜಿಗುಡುತ್ತಿತ್ತು. ಅದರಲ್ಲಿಯೂ ಹೂವಿನ ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಸೇವಂತಿಗೆ, ಜಾಜಿ. ಮಲ್ಲಿಗೆ, ಕನಕಾಂಬರ, ಗುಲಾಬಿ.. ಹೀಗೆ ಬಗೆಬಗೆಯ ಹೂವು ಮಾರುಕಟ್ಟೆಗೆ ಬಂದಿದ್ದು, ಗೌರಿಯ ಸಿಂಗಾರಕ್ಕೆಂದು ಜನ ಕೊಂಡು ಒಯ್ದರು.

ಸೇವಂತಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿತ್ತು. ಕೊಂಚ ಚೌಕಾಸಿ ಲೆಕ್ಕಾಚಾರದಲ್ಲಿ ಮಾರಾಟ ಕಂಡಿತು. ಕನಕಾಂಬರದ ಬೆಲೆ ಎಂದಿನಂತೆ ಗಗನಮುಖಿಯಾಗಿತ್ತು. ಕೊಂಚ ಬಾಡಿದ ಹೂವಿಗೆ ಕಡಿಮೆ ಬೆಲೆ ಇದ್ದರೆ. ತಾಜಾ ಕನಕಾಂಬರ ಮಾರಿಗೆ ₹ 200ರವೆರಗೂ ದರ ಏರಿಸಿಕೊಂಡಿತ್ತು. ಸ್ಫಟಿಕ, ಗುಲಾಬಿಗೂ ಬೇಡಿಕೆ ಇತ್ತು. ಚೆಂಡು ಹೂವಿನ ಬೆಲೆ ಮಾತ್ರ ಕೈಗೆಟಕುವಂತೆ ಇತ್ತು.

ಪೂಜೆಗೆ ಅವಶ್ಯವಾದ ಏಲಕ್ಕಿ ಬಾಳೆ ಹಣ್ಣಿನ ಬೆಲೆಯೂ ಏರಿಕೆ ಕಂಡಿತ್ತು. ಅರೆ ಮಾಗಿದ ಹಣ್ಣು ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರು ಚಿಪ್ಪುಗಟ್ಟಲೆ ಹಣ್ಣನ್ನು ಬುಟ್ಟಿಗಿಳಿಸಿಕೊಂಡರು. ಪಚ್ಚಬಾಳೆ ಎಂದಿನ ದರದಲ್ಲಿಯೇ ಮಾರಾಟವಾಯಿತು. ಉಳಿದ ಹಣ್ಣುಗಳ ಬೆಲೆಯೂ ಕೊಂಚ ಏರಿತ್ತು.

ತರಕಾರಿ ಸ್ಥಿರ: ತರಕಾರಿ ಮಾರುಕಟ್ಟೆಯಲ್ಲಿ ಸ್ಥಿರ ಧಾರಣೆ ಕಂಡುಬಂದಿತು. ಕ್ಯಾರೆಟ್‌ ಎಂದಿನಂತೆ ತುಟ್ಟಿಯಾಗಿದ್ದು, ಬೆಲೆ ಇಳಿಸಿಕೊಂಡಿರಲಿಲ್ಲ. ಬೀನ್ಸ್ ಕಳೆದ ವಾರಕ್ಕಿಂತ ಬೆಲೆ ಏರಿಸಿಕೊಂಡಿತ್ತು. ಟೊಮ್ಯಾಟೊ ಧಾರಣೆ ಕೂಡ ಎಂದಿನಂತೆ ಇತ್ತು. ಈರುಳ್ಳಿ, ಬೆಂಡೆಕಾಯಿ ಕೊಂಚ ಅಗ್ಗವಾಗಿತ್ತು.

ಹಬ್ಬದ ಕಾರಣ ನಿಂಬೆ ಹಣ್ಣಿಗೆ ಬೇಡಿಕೆ ಇತ್ತು. ವಾರದ ಹಿಂದೆ ₹ 1ಕ್ಕೆ 1ರಂತೆ ಸಿಗುತ್ತಿದ್ದ ನಿಂಬೆ ಇಂದು ದುಪ್ಪಟ್ಟು ಬೆಲೆಯಾಗಿತ್ತು. ಸೌತೆಕಾಯಿಯನ್ನು ಮಾತ್ರ ಕೇಳುವವರು ಇರಲಿಲ್ಲ. ₹ 10ಕ್ಕೆ ಮೂರರಂತೆ ಮಾರಾಟವಾಯಿತು. ಉಳಿದ ತರಕಾರಿಗಳ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸ ಇರಲಿಲ್ಲ. ಸೊಪ್ಪುಗಳ ದರ ಕೂಡ ಸ್ಥಿರವಾಗಿದ್ದು, ಎಲ್ಲವೂ ಕೈಗೆಟಕುವ ದರದಲ್ಲಿ ಮಾರಾಟವಾದವು.

ನಗರದ ಹಳೇ ಬಸ್ ನಿಲ್ದಾಣ, ಎಂ.ಜಿ.ರಸ್ತೆಯ ಆಸುಪಾಸು ಬಾಳೆ ಕಂದು, ಮಾವಿನ ಸೊಪ್ಪಿನ ಮಾರಾಟವು ಸಂಜೆ ಜೋರಾಗಿ ನಡೆಯಿತು.

**

ಹೂವಿನ ದರ (ಪ್ರತಿ ಮಾರಿಗೆ–ರೂ ಗಳಲ್ಲಿ)
ಸೇವಂತಿಗೆ (ಹಳದಿ)–80
ಸೇವಂತಿಗೆ (ಬಿಳಿ)–100
ಕನಕಾಂಬರ–100–150
ಮಲ್ಲಿಗೆ–100–120
ಸಣ್ಣ ಗುಲಾಬಿ–80
ಚೆಂಡು ಹೂವು–30

**

ಹಣ್ಣಿನ ದರ (ಪ್ರತಿ ಕೆ.ಜಿ.ಗೆ–ರೂ ಗಳಲ್ಲಿ)
ಏಲಕ್ಕಿ ಬಾಳೆ–80
ಪಚ್ಚಬಾಳೆ–40
ಸೇಬು–120–150
ದ್ರಾಕ್ಷಿ–80–100
ದಾಳಿಂಬೆ–80–100
ಸಪೋಟ–70–80
ಮೂಸಂಬಿ–60
ಕಿತ್ತಳೆ–70–80
ಪಪ್ಪಾಯ–15–20
ಕಲ್ಲಂಗಡಿ–20

**

ತರಕಾರಿ ದರ (ಪ್ರತಿ ಕೆ.ಜಿಗೆ– ರೂ ಗಳಲ್ಲಿ)

ಕ್ಯಾರೆಟ್‌–50
ಹುರುಳಿಕಾಯಿ (ಬೀನ್ಸ್)–30
ಬೆಂಡೆಕಾಯಿ–15
ಹಸಿ ಮೆಣಸಿನಕಾಯಿ–30
ಆಲೂಗಡ್ಡೆ–30
ಬೀಟ್‌ರೂಟ್–20
ಹೂಕೋಸು–20
ಟೊಮ್ಯಾಟೊ–10–12
ನುಗ್ಗೆಕಾಯಿ–30
ಸೋರೆಕಾಯಿ–25–30
ಈರುಳ್ಳಿ–12–15
ನಿಂಬೆ (ಒಂದಕ್ಕೆ) 2–3
ಸೌತೆಕಾಯಿ (ಒಂದಕ್ಕೆ) 3–4

**

ಸೊಪ್ಪಿನ ದರ (ಪ್ರತಿ ಕಂತೆಗೆ–ರೂ  ಗಳಲ್ಲಿ)
ಕೊತ್ತಂಬರಿ (ಫಾರ್ಮ್‌) 10
ಕೊತ್ತಂಬರಿ (ನಾಟಿ)–20
ಪುದೀನ–5
ಕರಿಬೇವು–5
ಮೆಂತ್ಯ (ದೊಡ್ಡದು)–10
ಮೆಂತ್ಯ (ಚಿಕ್ಕದು)–15
ದಂಟು, ಪಾಲಕ್‌, ಕೀರೆ–10

**

ಹಬ್ಬದ ಕಾರಣ ಹೂವುಗಳ ಬೆಲೆ ಏರಿಕೆಯಾಗಿದೆ. ಹೀಗೆ ನಾವು ಕೊಳ್ಳುವ ಪ್ರಮಾಣವೂ ಕಡಿಮೆಯಾಗಿದೆ. ತರಕಾರಿ ಬೆಲೆಯಲ್ಲಿ ಅಂತಹ ಬದಲಾವಣೆ ಆಗಿಲ್ಲ
ಪುಟ್ಟಸ್ವಾಮಯ್ಯ, ಗ್ರಾಹಕ

 

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !