ಸೋಮವಾರ, ಸೆಪ್ಟೆಂಬರ್ 21, 2020
22 °C

ಮುಳಗುಂದ: 40 ಚೀಲ ಯೂರಿಯಾ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಗುಂದ: ಸಮೀಪದ ಹೊಸೂರು ಗ್ರಾಮದ ಬೂದಯ್ಯ ಹಿರೇಮಠ ಎಂಬಾತನ ಮನೆಯ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆ ಜಾರಿ ದಳದ ಸಿಬ್ಬಂದಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 40 ಚೀಲ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆ ನೀಡುವಂತೆ ಬೂದಯ್ಯ ಅವರಿಗೆ ಸೂಚನೆ ನೀಡಿದ್ದಾರೆ.

ರೈತರೊಬ್ಬರು ನೀಡಿದ ದೂರು ಆಧರಿಸಿ ದಾಳಿ ನಡೆಸಲಾಗಿದೆ ಎಂದು ಗದಗ ಜಾರಿ ದಳದ ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲ ತಿಳಿಸಿದ್ದಾರೆ.

ಕೆಲವು ಅಧಿಕೃತ ಮಾರಾಟಗಾರರು ಹೆಚ್ಚು ಹಣ ಪಡೆದು ಯೂರಿಯಾ ಮಾರಾಟ ಮಾಡುತ್ತಿರುವ
ಆರೋಪ ಇದೆ. ಹೆಚ್ಚಿನ ದರಕ್ಕೆ ಹಾಗೂ ರಸೀದಿ ಇಲ್ಲದೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ಮೇಲೆಯು ಕ್ರಮ ಜರುಗಿಸುತ್ತೇವೆ. ಪ್ರತಿ ರೈತನಿಗೆ 2 ಚೀಲ ಮಾರಾಟ ಮಾಡಬೇಕು. ತೇವಾಂಶದ ಕಾರಣದಿಂದ ರೈತರು ಹೆಚ್ಚು ಯೂರಿಯಾ ಉಪಯೋಗ ಮಾಡುತ್ತಿದ್ದು ಅದಕ್ಕಾಗಿ ಕೊರತೆ ಉಂಟಾಗಿದೆ ಎಂದರು.

ಅಕ್ರಮ ಎಸಗುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿಯಲ್ಲಿ 5 ವರ್ಷಗಳ ಶಿಕ್ಷೆ ಹಾಗೂ
ದಂಡವನ್ನು ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.