ಗಜೇಂದ್ರಗಡ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುತ್ತಿದ್ದ ದನಗಳ ಸಂತೆ ಹಲವು ವರ್ಷಗಳಿಂದ ಬಂದ್ ಆಗಿದ್ದು, ತಾಲ್ಲೂಕಿನ ರೈತರಿಗೆ ತೊಂದರೆಯಾಗಿದೆ.

ಬೆಳಿಗ್ಗೆ 7 ಗಂಟೆಗೆ ಎಪಿಎಂಸಿ ಆವರಣದ ಹಿಂದಿನ ಬಯಲಿನಲ್ಲಿ ಆರಂಭವಾಗುತ್ತಿದ್ದ ದನಗಳ ಸಂತೆ 10 ಗಂಟೆಯವರೆಗೆ ನಡೆಯುತ್ತಿತ್ತು. 10 ಗಂಟೆ ಬಳಿಕ ರೋಣ ರಸ್ತೆಯಲ್ಲಿರುವ ಬಯಲು ಜಾಗದಲ್ಲಿ ಎತ್ತುಗಳನ್ನು ಓಡಿಸಿ ಪರೀಕ್ಷಿಸುವುದು, ಖರೀದಿಸಿ ರಾಸುಗಳನ್ನು ವಾಹನಗಳಲ್ಲಿ ಕೊಂಡೊಯ್ಯುವ ಪ್ರಕ್ರಿಯೆಗಳು ನಡೆಯುತ್ತಿದ್ದವು. ಆದರೆ, ಸಂತೆಯಲ್ಲಿ ಖರೀದಿಸಿದ ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನಗಳನ್ನು ಹಿಂದೂಪರ ಸಂಘಟನೆಗಳು ಹಲವು ಬಾರಿ ತಡೆದು ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಸಂತೆಗೆ ಖರೀದಿದಾರರು ಬಾರದೆ ಸಂತೆ ಬಂದ್ ಆಗಿದೆ ಎನ್ನಲಾಗುತ್ತಿದೆ.

ಸಂತೆ ನಡೆಯುತ್ತಿದ್ದ ಜಾಗದಲ್ಲಿ ಸುಮಾರು ₹1.1 ಕೋಟಿ ವೆಚ್ಚದಲ್ಲಿ ಕಾಳು ಸಂಸ್ಕರಣಾ ಘಟಕ ಹಾಗೂ ₹1.10 ಕೋಟಿ ವೆಚ್ಚದಲ್ಲಿ ರೈತರು, ವರ್ತಕರ ಫಸಲು ಒಣಗಿಸಲು ಬೃಹತ್ ಮುಚ್ಚು ಹರಾಜು ಕಟ್ಟೆ ನಿರ್ಮಿಸಲಾಗಿದ್ದು, ಅವುಗಳೂ ನಿರುಪಯುಕ್ತವಾಗಿವೆ. ಕಾಳು ಸಂಸ್ಕರಣಾ ಘಟಕ ಬಳಕೆಯಾಗದೆ ಯಂತ್ರೋಪಕರಣಗಳು ಹಾಳಾಗುವ ಸ್ಥಿತಿ ತಲುಪುತ್ತಿವೆ. ಮುಚ್ಚು ಹರಾಜು ಕಟ್ಟೆ ಕುಡುಕರ, ಇಸ್ಪಿಟ್ ಆಟಗಾರರ ಅಡ್ಡೆ ಹಾಗೂ ಬಯಲು ಶೌಚಾಲಯವಾಗಿ ಮಾರ್ಪಾಡಾಗಿದೆ. ಇದರಿಂದಾಗಿ ತಾಲ್ಲೂಕಿನ ರೈತರು ತಮ್ಮ ರಾಸುಗಳನ್ನು ಹಾಗೂ ಎತ್ತುಗಳನ್ನು ಮಾರಲು ಮತ್ತು ಬೇರೆಯವರಿಂದ ಕೊಂಡುಕೊಳ್ಳಲು ತೊಂದರೆಯಾಗುತ್ತಿದೆ. ಹೀಗಾಗಿ ರೈತರು ದೂರದ ಜಾಲಿಹಾಳ, ಕುಷ್ಟಗಿ ಸಂತೆಗಳಿಗೆ ಹೋಗುವುದು ಅನಿವಾರ್ಯ ಹಾಗೂ ಆರ್ಥಿಕ ನಷ್ಟವಾಗುತ್ತಿದೆ.

‘ಗಜೇಂದ್ರಗಡ ಎಪಿಎಂಸಿ ಹೊಳೆ ಆಲೂರು ಎಪಿಎಂಸಿ ಉಪ ಮಾರುಕಟ್ಟೆಯಾಗಿದ್ದು, ಸುಮಾರು 12 ಎಕರೆ ವಿಸ್ತೀರ್ಣ ಹೊಂದಿದೆ. ಎಪಿಎಂಸಿಯಲ್ಲಿ ವರ್ತಕರು ಹೆಚ್ಚಾಗಿದ್ದಾರೆಂದು 2014ರಲ್ಲಿ ಕಮಿಟಿ ಠರಾವು ಮಾಡಿ ಜಾನುವಾರು ಸಂತೆ ನಡೆಯುತ್ತಿದ್ದ ಜಾಗದಲ್ಲಿ 9 ನಿವೇಶನಗಳನ್ನು ನಿರ್ಮಿಸುವುದರ ಜೊತೆಗೆ, ಕಾಳು ಸಂಸ್ಕರಣಾ ಘಟಕ ಹಾಗೂ ಮುಚ್ಚು ಹರಾಜು ಕಟ್ಟೆ ನಿರ್ಮಿಸಲಾಗಿದೆ. ಕಾಳು ಸಂಸ್ಕರಣಾ ಘಟಕ ಬಳಕೆ ಮಾಡಿದವರು ಸುಮಾರು ₹4.12 ಲಕ್ಷ ಬಾಡಿಗೆ ಹಾಗೂ ₹5.69 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾನುವಾರುಗಳ ಸಂತೆ ನಿರಂತರವಾಗಿ ನಡೆಯುತ್ತಿದ್ದರೆ ಈ ಕಟ್ಟಡಗಳ ನಿರ್ಮಾಣ ಮಾಡುತ್ತಿರಲಿಲ್ಲ. ಸಂತೆಗೆ ಸದ್ಯ ಎಪಿಎಂಸಿ ಆವರಣದಲ್ಲಿ ಸ್ಥಳವಿಲ್ಲ’ ಎಂದು ಗಜೇಂದ್ರಗಡ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಸುವರ್ಣ ವಾಲಿಕಾರ ಮಾಹಿತಿ ನೀಡಿದರು.

‘ಗಜೇಂದ್ರಗಡದಲ್ಲಿ ಪ್ರತಿ ಮಂಗಳವಾರ ನಡೆಯುತ್ತಿದ್ದ ದನದ ಸಂತೆ ಮತ್ತೆ ಪ್ರಾರಂಭವಾಗಿ ಸಂತೆಯಲ್ಲಿ ರೈತರು ತಮ್ಮ ಜಾನುವಾರುಗಳನ್ನು ಮಾರುವುದು, ಖರೀದಿಸುವುದಕ್ಕೆ ನಮ್ಮ ಸಂಘಟನೆಯಿಂದ ಯಾವುದೇ ವಿರೋಧವಿಲ್ಲ. ಇದರಿಂದ ನಮ್ಮ ತಾಲ್ಲೂಕಿನ ರೈತರಿಗೂ ಅನುಕೂಲವಾಗುತ್ತದೆ. ಆದರೆ ಸಂತೆಯಲ್ಲಿ ಜಾನುವಾರುಗಳನ್ನು ಖರೀದಿಸಿ ಕಸಾಯಿಖಾನೆಗೆ ಸಾಗಿಸುವುದಕ್ಕೆ ನಮ್ಮ ವಿರೋಧವಿದೆ’ ಎಂದು ವಿಶ್ವಹಿಂದೂ ಪರಿಷದ್ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಕಲಾಲ ಹೇಳಿದರು.

‘ಗಜೇಂದ್ರಗಡದಲ್ಲಿ ಪ್ರತಿ ಮಂಗಳವಾರ ನಡೆಯುತ್ತಿದ್ದ ದನಗಳ ಸಂತೆ ಬಂದ್ ಆಗಿರುವುದರಿಂದ ಸುತ್ತಮುತ್ತಲಿನ ರೈತರಿಗೆ ತೊಂದರೆಯಾಗಿದೆ. ಆಕಳು, ಎಮ್ಮೆ, ಎತ್ತುಗಳನ್ನು ಮಾರಲು ಮತ್ತು ಖರೀದಿಸಲು ದೂರದ ಕುಷ್ಟಗಿ, ಜಾಲಿಹಾಳ ಸಂತೆಗಳಿಗೆ ಹೋಗುವಂತಾಗಿದೆ. ಗಜೇಂದ್ರಗಡದಲ್ಲಿ ಮತ್ತೆ ದನಗಳ ಸಂತೆ ಆರಂಭಿಸಿದರೆ ರೈತರಿಗೆ ಅನುಕೂಲವಾಗುತ್ತದೆ’ ಎಂದು ರೈತರಾದ ಶ್ರೀಕಾಂತ ಕಮಾಟ್ರ ಹಾಗೂ ಅಂದಪ್ಪ ಅಂಗಡಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.